ಸುಳ್ಯದಲ್ಲಿ ರಕ್ತದಾನ ಶಿಬಿರ ಉದ್ಘಾಟನೆ

0

ವಿವೇಕ ಜಾಗ್ರತಾ ಬಳಗ ಮತ್ತು ರೋಟರಿ ಕ್ಲಬ್ ಸುಳ್ಯ ಆಯೋಜನೆ

ವಿವೇಕ ಜಾಗ್ರತ ಬಳಗ, ಸುಳ್ಯ ಮತ್ತು ರೋಟರಿ ಕ್ಲಬ್, ಸುಳ್ಯ
ಇದರ ಜಂಟಿ ಆಶ್ರಯದಲ್ಲಿ ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಪುತ್ತೂರು ಇವರ ಸಹಕಾರದೊಂದಿಗೆ ಸ್ವಾಮಿ ವಿವೇಕಾನಂದರ ದೇಹತ್ಯಾಗ ಮಾಡಿದ ದಿನದ ಸ್ಮರಣೆಗಾಗಿ
ರಕ್ತದಾನ ಶಿಬಿರ (ಜು. 4 ) ಇಂದು ರೋಟರಿ ಕ್ಲಬ್ ಸುಳ್ಯದ ಸಭಾಂಗಣದಲ್ಲಿ ಉದ್ಘಾಟನೆ ಗೊಂಡಿತು.

ಉದ್ಘಾಟನೆಯನ್ನು ರೋ॥ ಡಾ॥ ರಾಮ್ ಮೋಹನ್ ಕೆ. ಯನ್ ಅಧ್ಯಕ್ಷರು, ರೋಟರಿ ಕ್ಲಬ್ ಸುಳ್ಯ ಇವರು ನೆರವೇರಿಸಿದರು.

ಶಿಬಿರದ ಮಾಹಿತಿಯನ್ನು ಡಾ| ಕೆ. ಸೀತಾರಾಮ ಭಟ್
ವೈದ್ಯಾಧಿಕಾರಿಗಳು, ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಪುತ್ತೂರು ಇವರು ನೀಡಿದರು.

ವೇದಿಕೆಯಲ್ಲಿ ರೊ. ಸಂಜೀವ ಕುದುಪಾಜೆ, ಆರೋಗ್ಯ ಸುರಕ್ಷಾ ಅಧಿಕಾರಿ ಮಾಲಿನಿ ಗಣೇಶ್, ಸುಳ್ಯ ವಿವೇಕ ಜಾಗ್ರತಾ ಬಳಗದ ಅಧ್ಯಕ್ಷೆ ವಿವೇಚನ, ರೋಟರಿ ಕ್ಲಬ್ ಸುಳ್ಯ ಇದರ ಕಾರ್ಯದರ್ಶಿ ಭಾಸ್ಕರ ನಾಯರ್, ಸಂಚಾಲಕ ಪ್ರಭಾಕರ ನಾಯರ್, ಖಜಾಂಜಿ ಮಧುಸೂಧನ, ವಿವೇಕ ಜಾಗ್ರತಾ ಬಳಗದ ಡಿವೈನ್ ಪಾರ್ಕ್ ಸಾಲಿಗ್ರಾಮದ ಪ್ರತಿನಿಧಿ ಸುಂದರ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಡಿವೈನ್ ಪಾರ್ಕ್ ಸಾಲಿಗ್ರಾಮದ ಪ್ರತಿನಿಧಿ ಸುಂದರ ಗೌಡ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು.

ಬಳಗದ ಪುಷ್ಪ ವಂದಿಸಿದರು.

ಇದೆ ಸಂದರ್ಭದಲ್ಲಿ ಇತ್ತೀಚಿಗೆ ಸೋಣಂಗೇರಿಯಲ್ಲಿ ಅಪಘಾತ ವಾಗಿ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧಾನರಾದ ಹಿನ್ನೆಲೆಯಲ್ಲಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ಇದೇ ದಿನ ಆರೋಗ್ಯ ಇಲಾಖೆಯವರಿಂದ ಉಚಿತ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ (ಬಿ.ಪಿ.) ತಪಾಸಣೆ ನಡೆಯಲಿದೆ.