ಪಶು ವೈದ್ಯಕೀಯ ಆಸ್ಪತ್ರೆಯ ನಿವೃತ್ತ ಉದ್ಯೋಗಿ ವಿಜಯ ಪಡ್ಡಂಬೈಲ್ ನಿಧನ

0

ಸುಳ್ಯದ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಹಲವಾರು ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಅಜ್ಜಾವರ ಗ್ರಾಮದ ಪಡ್ಡಂಬೈಲು ವಿಜಯ ಗೌಡರು ನಿನ್ನೆ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಸುಮಾರು 63 ವರ್ಷ ವಯಸ್ಸಾಗಿತ್ತು.
ಅಸೌಖ್ಯದಿಂದಿದ್ದ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿಯೇ ಅವರ ಪಾರ್ಥಿವ ಶರೀರವನ್ನು ಪಡ್ಡಂಬೈಲಿನ ಅವರ ಮನೆಗೆ ತರಲಾಗಿದೆ. ಅಂತ್ಯಸಂಸ್ಕಾರ ಇಂದು ಪೂರ್ವಾಹ್ನ ನಡೆಯಲಿದೆ ಎಂದು ತಿಳಿದುಬಂದಿದೆ.
ಮೃತರು ಪತ್ನಿ, ಪುತ್ರ , ಪುತ್ರಿಯನ್ನು, ಬಂಧುಗಳನ್ಬು ಅವರು ಅಗಲಿದ್ದಾರೆ.