ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಉಚಿತ ಸಂಸ್ಕಾರ ಶಿಕ್ಷಣ ತರಗತಿ ಆರಂಭ

0

ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಸಭಾಂಗಣದಲ್ಲಿ ನಾಲ್ಕನೇ ವರ್ಷದ ಉಚಿತ ಸಂಸ್ಕಾರ ದೀಪಿಕೆ ತರಗತಿಯನ್ನು ಜುಲೈ 4 ರಂದು ಆರಂಭಿಸಲಾಗಿದೆ.

ಸುಳ್ಯ ಚೆನ್ನಕೇಶವ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಡಾ. ಹರಪ್ರಸಾದ್ ತುದಿಯಡ್ಕ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ವೇದಮೂರ್ತಿ ವೆಂಕಟೇಶ ಶಾಸ್ತ್ರಿ, ಡಾ. ಬಿ.ಎನ್ ಕೃಷ್ಣ ಭಟ್, ಶ್ರೀಮತಿ ಡಾ.ವಿದ್ಯಾಶಾರದ, ಶ್ರೀಮತಿ ಲತಾ ಮಧುಸೂದನ್, ಶಿಕ್ಷಕರಾದ ಅಚ್ಯುತ ಅಟ್ಲೂರು, ಪ್ರಸನ್ನ ಐವರ್ನಾಡು, ಶ್ರೀಮತಿ ನಳಿನಾಕ್ಷಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪೋಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.

8 ವರ್ಷ ಮೇಲ್ಪಟ್ಟ ಮಕ್ಕಳಿಗೆ ಪ್ರತಿ ಶುಕ್ರವಾರ ಸಂಜೆ 4.30 ರಿಂದ 5.30ರವರೆಗೆ ತರಗತಿಗಳು ನಡೆಯಲಿದ್ದು, ಇದರಲ್ಲಿ ಶ್ಲೋಕ, ಭಜನೆ,ಕಥೆ, ಭಗವದ್ಗೀತೆ,ಪುರಾಣ ಮತ್ತು ದೇಶಭಕ್ತಿಗೀತೆ,ಆಚಾರ ವಿಚಾರಗಳ ಮಾರ್ಗದರ್ಶನ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.