ಡಾ. ಅಭಿಜ್ಞಾ ಪಲ್ಲತಡ್ಕರವರಿಗೆ ಬಿಡಿಎಸ್ ಪದವಿ ಪ್ರಧಾನ

0

ಧಾರವಾಡದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ಆಫ್ ಡೆಂಟಲ್ ಸೈನ್ಸ್‌ ಆಂಡ್ ಹಾಸ್ಪಿಟಲ್
ಇಲ್ಲಿಯ ಬಿಡಿಎಸ್ ವಿದ್ಯಾರ್ಥಿನಿ,
ಕನಕಮಜಲಿನ ಡಾ. ಅಭಿಜ್ಞಾ ಪಲ್ಲತಡ್ಕರವರು ಧಾರವಾಡದ ಶ್ರೀ ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ನಡೆದ ಪದವಿ ಪ್ರಧಾನ ಸಮಾರಂಭದಲ್ಲಿ ದಂತವೈದ್ಯಕೀಯ ಪದವಿ ಪಡೆದಿದ್ದಾರೆ.

ಪ್ರಗತಿ ಆಂಗ್ಲ ಮಾಧ್ಯಮ ಶಾಲೆ ಕಾಣಿಯೂರು ಹಾಗೂ ಪುತ್ತೂರಿನ ಅಂಬಿಕಾ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿರುವ ಈಕೆ ಕನಕಮಜಲಿನ ದಿ. ವಸಂತ ಮಾಸ್ತರ್ ಪಲ್ಲತಡ್ಕ ಮತ್ತು ಕದಿಕಡ್ಕ ಶಾಲಾ ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ಎನ್‌. ಟಿ. ಇವರ ಪುತ್ರಿ. ಇವರ ಸಹೋದರಿ ಕು.ಅನುಜ್ಞಾ ಪಲ್ಲತಡ್ಕ ಭಾರತ ರಕ್ಷಣಾ ಸಚಿವಾಲಯದ ಸಂಸ್ಥೆ ಬಿ ಇ ಎಲ್ ಬೆಂಗಳೂರು ಇಲ್ಲಿ ಪಿ ಡಿ ಐ ಸಿ ವಿಭಾಗದಲ್ಲಿ ಎಕ್ಸಿಕ್ಯೂಟಿವ್‌ ಆಫೀಸ‌ರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.