ಗ್ತಾಮ ಸಭೆಯಲ್ಲಿ ಕೆಂಪುಕಲ್ಲು, ಮರಳು ಸಮಸ್ಯೆ, ದಾರಿ ದೀಪ ಸಮಸ್ಯೆ ಬಗ್ಗೆ ಮಹತ್ವದ ಚರ್ಚೆ

ಗುತ್ತಿಗಾರು ಗ್ರಾ.ಪಂ ನ ಗ್ರಾಮ ಸಭೆ ಜು.5 ರಂದು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಗುತ್ತಿಗಾರು ಗ್ರಾ.ಪಂ ನ ಅಧ್ಯಕ್ಷೆ ಸುಮಿತ್ರಾ ಮೂಕಮಲೆ ಅಧ್ಯಕ್ಷತೆ ವಹಿಸಿದ್ದರು. ನೋಡೆಲ್ ಅಧಿಕಾರಿಯಾಗಿ ದೇವರಾಜ್ ಮುತ್ಲಾಜೆ ಉಪಸ್ಥಿತರಿದ್ದರು. ಉಪಾಧ್ಯಕ್ಷೆ ಭಾರತಿ ಸಾಲ್ತಾಡಿ, ಸದಸ್ಯರಾದ ವೆಂಕಟ್ ವಳಲಂಬೆ, ವಿಜಯಕುಮಾರ್ ಚಾರ್ಮತ, ಶ್ರೀಮತಿ ಶಾರದ ಮುತ್ಲಾಜೆ, ಶ್ರೀಮತಿ ಮಂಜುಳಾ ಮುತ್ಲಾಜೆ, ಹರೀಶ ಕೊಯಿಲ, ಶ್ರೀಮತಿ ಲತಾಕುಮಾರಿ ಆಜಡ್ಕ, ಶ್ರೀಮತಿ ಲೀಲಾವರಿ ಅಂಜೇರಿ, ವಿನಯ ಸಾಲ್ತಾಡಿ, ಶ್ರೀಮತಿ ಪ್ರಮೀಳಾ ಎರ್ದಡ್ಕ, ಜಗದೀಶ ಬಾಕಿಲ, ಪಿಡಿಒ ಧನಪತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
















ಗ್ತಾಮ ಸಭೆಯಲ್ಲಿ ಕೆಂಪುಕಲ್ಲು, ಮರಳು ಸಮಸ್ಯೆ, ದಾರಿ ದೀಪ ಸಮಸ್ಯೆ, ಅಪಾಯಕಾರಿ ಮರ ತೆರವು, ಸಿಸ್ಟರ್ ಗಳ ಸಮಸ್ಯೆ ಬಗ್ಗೆ ಮಹತ್ವದ ಸಭೆ ಚರ್ಚೆ ನಡೆಯಿತು.
ರಮೇಶ್ ಮೆಟ್ಟಿನಡ್ಕ ರೈತ ಗೀತೆ ಹಾಡಿದರು
.
ವಿಜಯಕುಮಾರ್ ಚಾರ್ಮತ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾ.ಪಂ ಸಿಬ್ಬಂದಿ ಅನಿತಾ ವರದಿ ವಾಚಿಸಿದರು. ಭಾರತಿ ಸಾಲ್ತಾಡಿ ವಂದನಾರ್ಪಣೆ ಮಾಡಿದರು. ತೇಜಾವತಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿದ್ದ ಗ್ರಾಮಸ್ಥರಿಗೆ ಅರಣ್ಯ ಇಲಾಖೆಯ ವತಿಯಿಂದ ಒಂದೊಂದು ರಾಂಪತ್ರೆ ಗಿಡ ವಿತರಿಸಲಾಯಿತು.










