
ಸುಳ್ಯದ ಸೈಂಟ್ ಜೋಸೆಫ್ ಪೂರ್ವ ಪ್ರಾರ್ಥಮಿಕ ಶಾಲೆಯ ಪೋಷಕರ ಪ್ರಥಮ ಸಭೆ ಜು. 4 ರಂದು ಅಪರಾಹ್ನ 2.30 ಕ್ಕೆ ನಡೆಯಿತು . ಸಭಾ ಕಾರ್ಯಕ್ರಮದಲ್ಲಿ ಪೂರ್ವ ಪ್ರಾರ್ಥಮಿಕ ಪೋಷಕ ಸಮಿತಿಯ ಉಪಾಧ್ಯಕ್ಷರಾದ ಪ್ರಬೋಧ್ ಶೆಟ್ಟಿ ಶಾಲಾ ಮುಖ್ಯೋಪಾಧ್ಯಾಯನಿ ಸಿಸ್ಟರ್ ಮೇರಿ ಸ್ಟೆಲ್ಲಾ, ಪ್ರಾಥಮಿಕ ಶಿಕ್ಷಕ ಕಾರ್ಯದರ್ಶಿ ಶ್ರೀಮತಿ ಭವ್ಯರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.















ಸಭೆಯು ಯುಕೆಜಿ ಪುಟಾಣಿಗಳ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ವಾರ್ಷಿಕ ವರದಿಯನ್ನು ಶಿಕ್ಷಕ ಕಾರ್ಯದರ್ಶಿ ಶ್ರೀಮತಿ ಭವ್ಯರವರು ವಾಚಿಸಿದರು. ಶಾಲೆಯ ನೀತಿ ನಿಯಮಗಳ ಬಗ್ಗೆ ಮುಖ್ಯೋಪಾಧ್ಯಯಿನಿ ಸಿಸ್ಟರ್ ಮೇರಿ ಸ್ಟೆಲ್ಲಾ ರವರು ಪೋಷಕರಿಗೆ ತಿಳಿಸಿದರು. ನೂತನ ಪೋಷಕ ಸಮಿತಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನೆರವೇರಿತು.

ಪೋಷಕ ಸಮಿತಿಯ ಉಪಾಧ್ಯಕ್ಷರಾದ ಪ್ರಬೋಧ್ ಶೆಟ್ಟಿಯವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಶಿಕ್ಷಕಿ ಶ್ರೀಮತಿ ಕವಿತಾ ರವರು ಅವರು ಸ್ವಾಗತಿಸಿ,ಶಿಕ್ಷಕಿ ಶ್ರೀಮತಿ ಆಶಾ ರವರು ವಂದಿಸಿದರು. ಸಹ ಶಿಕ್ಷಕಿಯರಾದ ಶ್ರೀಮತಿ ಮರಿಯಕ್ರಾಸ್ತಾ ಹಾಗೂ ಶ್ರೀಮತಿ ರೇಷ್ಮಾ ರವರು ಕಾರ್ಯಕ್ರಮ ನಿರೂಪಿಸಿದರು.










