ಕಾಂಗ್ರೆಸ್‌ ಧುರೀಣ ಧನಂಜಯ ಅಡ್ಪಂಗಾಯ ರವರ ಕಾರು ಅಪಘಾತ

0

ಬೆಂಗಳೂರಿನಿಂದ ಸುಳ್ಯಕ್ಕೆ ಬರುತ್ತಿದ್ದ ಸುಳ್ಯದ ಕಾಂಗ್ರೆಸ್‌ ಮುಖಂಡ ಧನಂಜಯ ಅಡ್ಪಂಗಾಯರ ಕಾರು ಮತ್ತು ಟಾಟಾ ಏಸ್‌ ಗಾಡಿ ಮಧ್ಯೆ ಸಂಪಾಜೆಯ ಗಾರೆಮುರಿಯಲ್ಲಿ ಪರಸ್ಪರ ಡಿಕ್ಕಿ ಸಂಭವಿಸಿ ಧನಂಜಯ ಅಡ್ಪಂಗಾಯರು ಪಾರಾದ ಘಟನೆ ಇಂದು (ಜು.7) ಬೆಳಿಗ್ಗೆ ಸಂಭವಿಸಿದೆ.
ಧನಂಜಯ ಅಡ್ಪಂಗಾಯರು ಬೆಂಗಳೂರಿನಿಂದ ಸ್ವಿಪ್ಟ್‌ ಕಾರ್‌ ನಲ್ಲಿ ಬರುತ್ತಿದ್ದರು. ಸುಳ್ಯದಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಟಾಟಾ ಏಸ್‌ ಕಾರು ಮಧ್ಯೆ ಅಪಘಾತ ಸಂಭವಿಸಿದೆ. ಡಿಕ್ಕಿಯಾದ ಪರಿಣಾಮಧನಂಜಯ ಅಡ್ಪಂಗಾಯ ಕಾರು ಜಖಂ ಗೊಂಡಿದ್ದು ಟಾಟಾ ಏಸ್‌ ಕಾರು ಪಲ್ಟಿಯಾಗಿ ಬಿದ್ದಿದೆ. ಯಾರಿಗೂ ಯಾವುದೇ ಗಾಯವಾಗಿಲ್ಲ ಎಂದು ತಿಳಿದು ಬಂದಿದೆ.