ಗೆಳೆಯರ ಬಳಗ ದೇವ ಇದರ ವತಿಯಿಂದ ಮಾವಿನಕಟ್ಟೆ – ದೇವ – ಗುರುಪುರ ಜಿಲ್ಲಾ ಪಂಚಾಯತ್ ರಸ್ತೆಯ ಬದಿಯ ಕಾಡು ಕಡಿಯುವ ಶ್ರಮದಾನ ಮಾಡಲಾಯಿತು. ರಸ್ತೆಯ ಎರಡು ಬದಿಯಲ್ಲಿ ಗಿಡ ಗಂಟೆಗಳು ಬೆಳೆದು ವಾಹನ ಸಂಚಾರಕ್ಕೆ ಸವಾರರಿಗೆ ತೊಂದರೆ ಆಗುವುದನ್ನು ಮನಗಂಡು ಊರಿನವರ ಸಹಕಾರ ಪಡೆದು ಶ್ರಮದಾನ ಮಾಡಲಾಯಿತು.

ಈ ಶ್ರಮದಾನದಲ್ಲಿ ಗೆಳೆಯರ ಬಳಗದ ಅಧ್ಯಕ್ಷ ಮುಕುಂದ ಹಿರಿಯಡ್ಕ, ಗೌರವ ಅಧ್ಯಕ್ಷರಾದ ಯೋಗೀಶ್ ದೇವ, ಕಾರ್ಯದರ್ಶಿ ಜಯಂತ ದೇವ, ಪ್ರಶಾಂತ ದೇವ, ಕಾರ್ತಿಕ್ ದೇವ, ಗಿರೀಶ್ ಅಡ್ಡನಪಾರೆ, ಚಿದಾನಂದ ಪೇರಳಕಜೆ, ಸತೀಶ್ ಕನ್ನಡಕಜೆ, ಮಿತ್ರಕುಮಾರ ಕನ್ನಡಕಜೆ, ಗೋಪಾಲಕೃಷ್ಣ ಕನ್ನಡಕಜೆ, ಬಾಲಕೃಷ್ಣ ಹಿರಿಯಡ್ಕ, ಸತೀಶ್ ಪೇರಳಕಜೆ, ರಾಮಚಂದ್ರ ಅಚ್ರ ಪ್ಪಾಡಿ, ಚರಣ್ ದೇವ, ರಾಕೇಶ್ ಕೊಲ್ಚಾರ್, ಗಗನ್ ದೀಪ್ ದೇವ, ಆದೇಶ್ ದೇವ, ಗುರುಪ್ರಸಾದ್ ಬೆದ್ರುಕಾಡು, ಕೃಷ್ಣ ಕುಮಾರ್, ವಿಶ್ವನಾಥ ಬೆದ್ರುಕಾಡು, ಪುನೀತ್ ದೇವ, ಯೋಗಿತ್ ದೇವ, ಹರಿಶ್ಚಂದ್ರ ಮಣಿಯನ, ಹರೀಶ್ ಅಚ್ರಪ್ಪಾಡಿ ಶ್ರಮದಾನದಲ್ಲಿ ಪಾಲ್ಗೊಂಡರು.
















ಗೆಳೆಯ ಬಳಗದ ಶ್ರಮ ಸೇವೆಯೂ ಊರಿನವರ ಮೆಚ್ಚುಗೆಗೆ ಪಾತ್ರವಾಯಿತು. ಶ್ರಮದಾನದಲ್ಲಿ ಪಾಲ್ಗೊಂಡ ಎಲ್ಲರಿಗೂ ಗೆಳೆಯರ ಬಳಗದ ವತಿಯಿಂದ ಬೆಳಿಗ್ಗಿನ ಉಪಹಾರ, ಮದ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಯಿತು.










