ಶಾಂತಿನಗರ ಹಿರಿಯ ಪ್ರಾಥಮಿಕ ಶಾಲೆಗೆ ಊಟದ ತಟ್ಟೆ ಜೋಡಿಸಲು ಸ್ಟೀಲ್ ಸ್ಟ್ಯಾಂಡ್ ಕೊಡುಗೆ

0

ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಶಾಂತಿನಗರ ಇಲ್ಲಿಯ ವಿದ್ಯಾರ್ಥಿಗಳು ಊಟ ಮಾಡುವ ಸ್ಟೀಲ್ ತಟ್ಟೆಯನ್ನು ವ್ಯವಸ್ಥಿತವಾಗಿ ಜೋಡಿಸಿಡುವ ಉದ್ದೇಶದಿಂದ, ಶಾಂತಿನಗರ ನಿವಾಸಿ ಪೈಚಾರ್ ಶ್ರೀಶಕ್ತಿ ಆಟೋ ವರ್ಕ್ಸ್ ಮಾಲಕರಾದ ಶ್ರೀಮತಿ ಜಯಂತಿ ಹಾಗೂ ಶ್ರೀಯುತ ಸತ್ಯನಾರಾಯಣ ಆಚಾರ್ಯ ಇವರು ತಟ್ಟೆ ಇಡುವ ಸ್ಟೀಲ್ ಸ್ಟಾಂಡ್ ಅನ್ನು ಕೊಡುಗೆಯಾಗಿ ನೀಡಿರುತ್ತಾರೆ.

ತಮ್ಮ ಮೂರು ಮಕ್ಕಳು ಸರಳ ಎಸ್.ಎನ್. ಸುವಿನ ಎಸ್. ಎನ್.ಹಾಗೂ ಭಾಗ್ಯಶ್ರೀ ಎಸ್.ಎನ್ ರವರು ನಮ್ಮ ಶಾಂತಿನಗರ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಉತ್ತಮ ರೀತಿಯ ಉದ್ಯೋಗ ಪಡೆದು ಆದರ್ಶ ಜೀವನ ನಡೆಸಲು ಕಾರಣವಾದ ಈ ವಿದ್ಯಾ ದೇಗುಲಕ್ಕೆ ಕೊಡುಗೆಯಾಗಿ ನೀಡಿದ ಸ್ಟೀಲ್ ಸ್ಟ್ಯಾಂಡನ್ನು ಎಲ್ಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪ್ರೀತಿಯಿಂದ ಸ್ವೀಕರಿಸಿ ಶುಭ ಹಾರೈಸಿ ಮಹಾದಾನಿಗೆ ತುಂಬು ಹೃದಯದ ಧನ್ಯವಾದವಿತ್ತರು.