ಹರಿಹರದಿಂದ ಕರಂಗಲ್ಲು ಮೂಲಕ ಕಂದ್ರಪ್ಪಾಡಿ ಗುತ್ತಿಗಾರು ಸಂಪರ್ಕಿಸುವ ರಸ್ತೆಯ ಕರಂಗಲ್ಲಿನ ಕೆಲ ಭಾಗದಲ್ಲಿ ದುರಸ್ತಿ ಕೆಲಸವನ್ನು ಜು.6 ರಂದು ಮಾಡಲಾಯಿತು.















ಪೈಪ್ ಲೈನ್ ಕಾಮಗಾರಿ ಹಾಗೂ ಮಳೆ ಅವಾಂತರದಿಂದ ಸಂಪೂರ್ಣ ಕೆಸರುಮಯವಾಗಿ ಕೆಟ್ಟು ಹೋಗಿ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಇದನ್ನು ಮನಗಂಡು ಕರಂಗಲ್ಲು ಹಾಗು ದೊಡ್ಡಕಜೆಯ ಜನರು ಶ್ರಮದಾನದ ಮೂಲಕ ಸರಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.










