ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕದ ನಿವಾಸಿಯೊಬ್ಬರು ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜು.7 ರಂದು ವರದಿಯಾಗಿದೆ.
ಮೃತ ಪಟ್ಟ ವ್ಯಕ್ತಿ ರಬ್ಬರ್ ಟ್ಯಾಪರ್ ಕೆಲಸ ಮಾಡುತ್ತಿದ್ದ ಸಂಜೀವ (45) ಎಂದು ತಿಳಿದು ಬಂದಿದೆ.















ವಿಷಯ ತಿಳಿದು ಸುಳ್ಯ ಪೋಲಿಸರು ಸ್ಥಳಕ್ಕೆ ತೆರಳಿ ಮಹಜರು ನಡೆಸಿ ಬಳಿಕ ಸುಳ್ಯ ಸರಕಾರಿ ಆಸ್ಪತ್ರೆಗೆ ಶಿವ ಆಂಬ್ಯುಲೆನ್ಸ್ ಮೂಲಕ ಕರೆ ತರಲಾಗಿದೆ.
ಪ್ರಕರಣದ ಬಗ್ಗೆ ಪೋಲಿಸರು ವಿಚಾರಣೆ ನಡೆಸುತ್ತಿದ್ದಾರೆ. ಆತ್ಮಹತ್ಯೆ ಗೆ ಕಾರಣ ಏನೆಂದು ತಿಳಿದು ಬಂದಿಲ್ಲ.










