ಸುಳ್ಯ ಸ.ಪ.ಪೂ. ಕಾಲೇಜು ಪ್ರೌಢಶಾಲಾ ವಿಭಾಗ : ವಿದ್ಯಾರ್ಥಿ ಸಂಘಕ್ಕೆ ಚುನಾವಣೆ

0

ಸುಳ್ಯ ಸ. ಪ. ಪೂ. ಕಾ. ಸುಳ್ಯ. ಪ್ರೌಢಶಾಲೆ ಶಾಲಾ ಸರಕಾರದ ಚುನಾವಣೆ ನಡೆಯಿತು. 2025-26
ಶಾಲಾ ನಾಯಕ ಲಿಖಿತ್ ಎಂ. ಆರ್ 10 ನೇ ತರಗತಿ ಮತ್ತು ಶಾಲಾ ಉಪನಾಯಕ ಚರೇಶ್ ಪಿ. ಜಿ. 9ನೇ ತರಗತಿ ಆಯ್ಕೆಯಾದರು. ಚುನಾವಣೆಯ ಎಲ್ಲಾ ಹಂತಗಳ ಮೂಲಕ ಇ. ವಿ. ಎಂ. ಗಳನ್ನು ಬಳಸಿಕೊಂಡು ಚುನಾವಣೆ ಮಾಡಲಾಯಿತು. ಮುಖ್ಯ ಚುನಾವಣಾ ಅಧಿಕಾರಿಗಳಾಗಿ ಶಾಲಾ ಉಪಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ ಮತ್ತು ಡಾl ಸುಂದರ ಕೇನಾಜೆ ಮತ್ತು ಉಪ ಚುನಾವಣಾ ಅಧಿಕಾರಿಗಳಾಗಿ ಪೂರ್ಣಿಮಾ ಟಿ. ಮತ್ತು ವೀಣಾ ಕೆ. ಕೆ. ಕರ್ತವ್ಯ ನಿರ್ವಹಿಸಿದರು. ಸಹಶಿಕ್ಷಕರೆಲ್ಲರೂ ಮತಗಟ್ಟೆ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಕರ್ತವ್ಯ ನಿರ್ವಹಿಸಿದರು.