ಮಡಪ್ಪಾಡಿ : ಸರಕಾರಿ ಬಸ್ಸಿಗೆ ಸ್ವಾಗತ

0

ಮಡಪ್ಪಾಡಿಗೆ ಪುನರಾರಂಭಗೊಂಡ ಸರಕಾರಿ ಬಸ್ಸಿಗೆ ಇಂದು ಬೆಳಿಗ್ಗೆ ಸ್ವಾಗತ ಕಾರ್ಯಕ್ರಮ ನಡೆಯಿತು.

ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಪಿ. ಸಿ. ಜಯರಾಮ, ಗ್ಯಾರಂಟಿ ಸಮಿತಿ ತಾಲೂಕು ಸದಸ್ಯ ಸೋಮಶೇಖರ ಕೇವಳ, ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಜಯರಾಮ, ಮಡಪ್ಪಾಡಿ ಸೊಸೈಟಿ ನಿರ್ದೇಶಕ ಚಂದ್ರಶೇಖರ ಗುಡ್ಡೆ, ಹಾಗೂ ಊರವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸಂಜೆ ಬಂದು ಮಡಪ್ಪಾಡಿಯಲ್ಲಿ ತಂಗುತ್ತಿದ್ದ ಸರಕಾರಿ ಬಸ್ಸು ಲಾಕ್ ಡೌನ್ ಆದ ಬಳಿಕ ಬರುತ್ತಿರಲಿಲ್ಲ. ಈ ಬಸ್ಸು ಬೇಕೆಂದು ಗ್ರಾಮಸ್ಥರ ಬಹು ಅಗತ್ಯದ ಬೇಡಿಕೆಯಾಗಿತ್ತು. ಹೀಗಾಗಿ ಊರಿನ ಮುಖಂಡರು ಸಾಕಷ್ಟು ಬೇಡಿಕೆ ಗಳನ್ನು ಸಲ್ಲಿಸಿದ್ದರು. ಇದರ ಫಲವಾಗಿ ಮಡಪ್ಪಾಡಿಯಲ್ಲಿ ಈ ಹಿಂದೆ ತಂಗುತ್ತಿದ್ದ ಸರಕಾರಿ ಬಸ್ಸು ಪುನರಾರಂಭಗೊಂಡಿದೆ.