ವರ್ಷದೊಳಗೆ ಸೇತುವೆ ಮಾಡುವ ಭರವಸೆ















ಬಾಳುಗೋಡಿನಲ್ಲಿ ಇತ್ತೀಚೆಗೆ ಮೃತಪಟ್ಟ ಯೋಧ ದನಂಜಯ ಬಾಳುಗೋಡು ಅವರ ಮನೆಗೆ ಜು. 6 ರಂದು ಶಾಸಕಿ ಭಾಗೀರಥಿ ಮುರುಳ್ಯ ಭೇಟಿ ನೀಡಿದ್ದರು.

ದನಂಜಯ ಅವರ ಮೃತ ದೇಹಗಳನ್ನು ಅಡಿಕೆ ಮರದ ಪಾಲದಲ್ಲಿ ಸಾಗಿಸಿ ಅಂತ್ಯ ಸಂಸ್ಕಾರ ನೆರವೇರಿಸಲಾಗಿದ್ದು ಈ ಘಟನೆ ಮಾದ್ಯಮಗಳಲ್ಲಿ ವರದಿಯಾಗಿತ್ತಲ್ಲದೆ, ಸೇತುವೆ ಇಲ್ಲದೇ ಇದ್ದ ಬಗ್ಗೆ ಟೀಕೆಯೂ ವ್ಯಕ್ತವಾಗಿತ್ತು. ಸ್ಥಳಕ್ಕೆ ಭೇಟಿ ಇತ್ತ ಶಾಸಕಿ ಧನಂಜಯ ಅವರ ಮುಂದಿನ ವರ್ಷದ ಪುಣ್ಯ ಸ್ಮರಣೆಯ ದಿನದೊಳಗಾಗಿ ಸೇತುವೆ ಮಾಡಿ ಕೊಡುವ ಭರವಸೆ ನೀಡಿದ್ದಾರೆ. ಈ ಸಂದರ್ಭ ಬಿಜೆಪಿ ಮುಖಂಡ ವೆಂಕಟ್ ದಂಬೆಕೋಡಿ, ಚಂದ್ರಹಾಸ ಶಿವಾಲ, ಹರಿಹರ ಪಳ್ಳತಡ್ಕ ಗ್ರಾ.ಪಂ ಉಪಾಧ್ಯಕ್ಷ ಜಯಂತ ಬಾಳುಗೋಡು, ಧರ್ಮಪಾಲ ಮುಚ್ಚಾರ, ರವಿರಾಜ್ ಬಾಳುಗೋಡು, ನವೀನ್ ಬಾಳುಗೋಡು, ರಾಧಾಕೃಷ್ಣ ಕಟ್ಟೆಮನೆ, ಯಶವಂತ ಬಾಳುಗೋಡು, ಅಜೇಯ ಪೊಯ್ಯಮಜಲು, ಕೇಶವ ಬಾಳುಗೋಡು ಮತ್ತಿತರರು ಉಪಸ್ಥಿತರಿದ್ದರು.










