ಗೃಹ ಸಚಿವ ಡಾ. ಜಿ.ಪರಮೇಶ್ವರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮನ

0

ಅಧಿಕಾರಿಗಳು, ಮುಖಂಡರಿಂದ ಸ್ವಾಗತ

ಕರ್ನಾಟಕ ಸರ್ಕಾರದ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಜು.8 ರ ಸಂಜೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸಿದ್ದಾರೆ.

ದೇವಸ್ಥಾನ ದ ಆದಿಶೇಷ ಗೆಸ್ಟ್ ಹೌಸ್ ಗೆ ಬಂದ ಅವರನ್ನು ವ್ಯವಸ್ಥಾಪನಾ ಸಮಿತಿಯ ಅಶೋಕ್ ನೆಕ್ರಾಜೆ, ಡಾ. ರಘು, ಮಹೀಶ್ ಕುಮಾರ್ ಕರಿಕ್ಕಳ, ‌ ಸೌಮ್ಯ ಭರತ್, ಪ್ರವೀಣ ರೈ,
ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ,
ಮಾಸ್ಟರ್ ಪ್ಲಾನ್ ಸಮಿತಿಯ ಲೋಲಾಕ್ಷ ಕೈಕಂಬ, ಪವನ್ ಎಂ.ಡಿ
ಕಡಬ ಗ್ಯಾರಂಟಿ ಸಮಿತಿ ಅಧ್ಯಕ್ಷ ಸುಧೀರ್ ಶೆಟ್ಟಿ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್, ಸುಳ್ಯ ಶಾಸಕ ಅಭ್ಯರ್ಥಿಯಾಗಿದ್ದ ಕೃಷ್ಣಪ್ಪ, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಹೀದ್, ಸುಳ್ಯ ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್, ಮತ್ತಿತರರು ಸ್ವಾಗತಿಸಿದರು.

ಈ ಸಂದರ್ಭ ಡಿ. ವೈ ಎಸ್.ಪಿ ಅರುಣ್ ನಾಗೇಗೌಡ, ಸರ್ಕಲ್ ಇನ್ಸ್ ಪೆಕ್ಟ್ರರ್ ತಿಮ್ಮಪ್ಪ ನಾಯ್ಕ, ಸುಬ್ರಹ್ಮಣ್ಯ ಎಸ್ ಐ ಕಾರ್ತಿಕ್, ಕಿಶೋರ್ ಕುಮಾರ್ ಅರಂಪಾಡಿ, ಕಾರ್ತಿಕ್, ಪರಮೇಶ್ವರ ಕೆಂಬಾರೆ, ಹರ್ಷಿತ್ ಕೊರ್ಬಟ, ಕೃಷ್ಣಮೂರ್ತಿ ಭಟ್, ದಿನೇಶ್ ಎಣ್ಣೆಮಜಲು, ಗೋಪಾಲ ಎಣ್ಣೆಮಜಲು, ಪ್ರಶಾಂತ್ ಮರುವಂಜ, ಜಿ.ಕೆ ಹಮೀದ್ , ಶೇಷಕುಮಾರ್, ದೇವಸ್ಥಾನದ ಶಿಷ್ಟಾಚಾರ ವಿಭಾಗದ ಜಯರಾಮ ರಾವ್, ಪ್ರಮೋದ್ ಮತ್ತಿತರರು ಉಪಸ್ಥಿತರಿದ್ದರು.


ನಾಳೆ ಬೆಳಗ್ಗೆ ಆಶ್ಲೇಷ ಪೂಜೆಯಲ್ಲಿ ಪಾಲ್ಗೊಳ್ಳಲಿರುವುದಾಗಿ ತಿಳಿದು ಬಂದಿದೆ.