ಕನಕಮಜಲು ಪೇಟೆಯಲ್ಲಿರುವ ಬಸ್ಸು ನಿಲುಗಡೆಯ ಜಾಗದಲ್ಲಿ ಮಳೆ ನೀರು ಹರಿದು ಬಂದು ಡಾಮರು ರಸ್ತೆ ಬದಿ ಚರಂಡಿ ನಿರ್ಮಾಣ ಆಗಿ ದಿನನಿತ್ಯ ಹೋಗುವ ಶಾಲಾ ಮಕ್ಕಳಿಗೆ, ವಯೋವೃದ್ದರಿಗೆ, ಅಂಗವಿಕಲರಿಗೆ ಬಸ್ಸು ಏರಲು ಆಗಾದ ಸ್ಥಿತಿ ನಿರ್ಮಾಣವಾಗಿದೆ.















ಸುಳ್ಯಕ್ಕೆ ಬಸ್ ಹತ್ತುವ ಜಾಗದಲ್ಲಿ ಈ ರೀತಿ ಚರಂಡಿಯಾಗಿದ್ದು, ಮಕ್ಕಳು ಜಾರಿ ಬಿದ್ದು ವಾಪಸ್ಸು ಮನೆಗೆ ಹೋದ ಘಟನೆಯು ತುಂಬಾ ನಡೆದಿದ್ದು, ಕೂಡಲೇ ಇದಕ್ಕೆ ಸಂಬಂಧ ಪಟ್ಟ ಇಲಾಖೆಯವರು ಸ್ಥಳ ಪರಿಶೀಲಿಸಿ ದುರಸ್ಥಿ ಮಾಡಿಸಿ ಇಲ್ಲಿ ಆಗುತ್ತಿರುವ ತೊಂದರೆಯನ್ನು ಸರಿಪಡಿಸಬೇಕೆoದು ಶಾಲಾ ಮಕ್ಕಳ ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ.










