ಸುಳ್ಯದಲ್ಲಿ ಕೆನ್ಅಯಾನ್ ಹಾಗೂ ಉದ್ಯೋಗ ಮಾಹಿತಿ ಕೇಂದ್ರ ಶುಭಾರಂಭ

0

ಸುಳ್ಯ ಸಿ ಎ ಬ್ಯಾಂಕ್ ವಾಣಿಜ್ಯ ಸಂಕೀರ್ಣದಲ್ಲಿ ಕೆನ್‌ಅಯಾನ್ ನೀರಿನ ಶುದ್ದೀಕರಣ ಘಟಕಗಳ ಮಾರಾಟ, ನಿರ್ಮಾಣ ನಿರ್ವಹಣೆ,ಬಿಡಿ ಭಾಗಗಳ ಕೇಂದ್ರ ಮತ್ತು ಸಿ ಎ ಎಸ್ ಉದ್ಯೋಗ ಮಾಹಿತಿ ಮತ್ತು ಸಂದರ್ಶನ ಕೇಂದ್ರದ ಸಂಸ್ಥೆ ಜು. 9 ರಂದು ಶುಭಾರಂಭ ಗೊಂಡಿತು.

ನೂತನ ಸಿ.ಎ.ಎಸ್ ಕಚೇರಿಯನ್ನು ಸುಳ್ಯ ಸಿ ಎ ಬ್ಯಾಂಕ್ ಅಧ್ಯಕ್ಷರಾದ ವಿಕ್ರಮ್ ಅಡ್ಪಂಗಾಯ ರವರು ಉದ್ಘಾಟಿಸಿ ಶುಭ ಹಾರೈಸಿದರು
ಸುದ್ದಿ ಸಮೂಹ ಸಂಸ್ಥೆಯ ಸುಳ್ಯ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ ಕೆನ್ಆಯಾನ್ ಸಂಸ್ಥೆ ಯನ್ನು ಉದ್ಘಾಟನೆ ಮಾಡಿ ಸಂಸ್ಥೆಗೆ ಶುಭ ಹಾರೈಸಿದರು
ಈ ಸಂಧರ್ಭದಲ್ಲಿ ಆಡಳಿತ ಪಾಲುದಾರರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಸಂಸ್ಥೆಯ ಬಗ್ಗೆ ಮಾತನಾಡಿದ ಸಂಸ್ಥೆಯ ಪಾಲುಧಾರರು ಕಳೆದ 10 ವರ್ಷಗಳಿಂದ ಈ ಸಂಸ್ಥೆಯು ಬೇರೆ ಬೇರೆ ಕಡೆಗಳಲ್ಲಿ ಕಾರ್ಯ ಚರಿಸುತಿದ್ದು ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ನೀಡುತ್ತಾ ಬಂದಿದೆ. ಸಂಸ್ಥೆ ಮೂಲಕ ನೂರಾರು ಫಲಾನುಭವಿ ಯುವಕ ಯುವತಿಯರಿಗೆ ಅವರ ನೆಚ್ಚಿನ ಉದ್ಯೋಗವಕಾಶ ವನ್ನು ಕಲ್ಪಿಸಿಕೊಡುವುದರಲ್ಲಿ ನಮ್ಮ ಸಂಸ್ಥೆ ಯಶಸ್ವಿಯಾಗಿದೆ.


ಕೆನ್ಆಯಾನ್ ನೀರಿನ ಶುದ್ದೀಕರಣ ಘಟಕಗಳ ಮಾರಾಟ ನಿರ್ಮಾಣ ನಿರ್ವಹಣೆ ಯು ಕುಡಿಯುವ ನೀರಿನ ವಿಭಾಗ ದಿಂದ ಹಿಡಿದು ಕೃಷಿಗೆ ನೀಡುವ ನೀರಿನ ವಿಭಾಗದವರೆಗೂ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ನೀಡುವ ಮೂಲಕ ಮಾರ್ಕೆಟ್ ನಲ್ಲಿ ಜನಮನ್ನಣೆ ಗಳಿಸಿದೆ. ಇದೀಗ ಸುಳ್ಯದಲ್ಲಿ ನಮ್ಮ ಕಚೇರಿಯನ್ನು ಆರಂಭಿಸಿದ್ದು ಇದರ ಯಶಸ್ವಿ ಗೆ ಸುಳ್ಯದ ಜನತೆಯ ಸಹಕಾರ ಮತ್ತು ಪ್ರೋತ್ಸಾಹ ಬೇಕಾಗಿದೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಹಿರಿಯರಾದ ತಿರುಮಲೇಶ್ವರ ಚಂದ್ರಶೇಖರ ಚೋಡಿಪನ್ನೆ,ಲೋಕೇಶ್ವರ, ಶ್ರೀಮತಿ ಮನೋರಮ ,ಮನ್ಮಥ ಅಡ್ಪಂಗಾಯ, ಬಾಲಚಂದ್ರ ಅಡ್ಪಂಗಾಯ, ಜಗನ್ನಾಥ, ಶ್ರೀಮತಿ ವಿಶಾಲಾಕ್ಷಿ, ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆಯ ಸಿಬ್ಬಂದಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.