ಕಲ್ಮಡ್ಕ: ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಗಳ ಉದ್ಘಾಟನೆ

0

ಕರ್ನಾಟಕ ಸರಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಸುಳ್ಯ, ಗ್ರಾ. ಪಂ. ಕಲ್ಮಡ್ಕ ಇಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಎಲ್. ಕೆ. ಜಿ ಮತ್ತು ಯು. ಕೆ. ಜಿ ಉದ್ಘಾಟನೆ ಹಾಗೂ ಪೌಷ್ಟಿಕ ಆಹಾರ ಕಾರ್ಯಕ್ರಮ ಜು.8 ರಂದು ನಡೆಯಿತು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಶೈಲಜಾರವರು ತರಗತಿಗಳನ್ನು ಉದ್ಘಾಟಿಸಿ ಮಾತನಾಡಿ, ಎಲ್ಲರ ಸಹಕಾರ ಹಾಗೂ ಪ್ರೋತ್ಸಾಹ ದೊರೆತಾಗ ಗ್ರಾಮೀಣ ಭಾಗದಲ್ಲಿ ಉತ್ತಮ ಶಿಕ್ಷಣ ದೊರಕಲು ಸಾಧ್ಯವಾಗುತ್ತದೆ ಹಾಗೂ ಗ್ರಾಮದ ವಿದ್ಯಾಭಿಮಾನಿಗಳ ಬಗ್ಗೆ ಪ್ರಶಂಸಿ ಮಕ್ಕಳಿಗೆ ಶುಭಹಾರೈಸಿದರು.

ಗ್ರಾ. ಪಂ. ಸದಸ್ಯೆ ಶ್ರೀಮತಿ ಮೀನಾಕ್ಷಿ ಬೊಮ್ಮೇಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಲ್ಮಡ್ಕ ಗ್ರಾ. ಪಂ. ಅಭಿವೃದ್ದಿ ಅಧಿಕಾರಿ ಕೀರ್ತಿಪ್ರಸಾದ್, ಮೇಲ್ವಿಚಾರಕಿ ಶ್ರೀಮತಿ ರವಿಶ್ರೀ,ವಿಶ್ರಾಂತ ಮುಖ್ಯ ಗುರು ಸುಬ್ರಾಯ ಓಣಿಯಡ್ಕ, ಸ.ಹಿ ಪ್ರಾ ಶಾಲೆ ಕಲ್ಮಡ್ಕ ಇಲ್ಲಿನ ಸಹಶಿಕ್ಷಕ ಮಹದೇವಸ್ವಾಮಿ, ಎಸ್. ಡಿ. ಎಂ. ಸಿ ಅಧ್ಯಕ್ಷ ರಾಮಚಂದ್ರ ಕಾಚಿಲ, ಸೌಹಾರ್ದ ಮಹಿಳಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಸುಲೋಚನಾ ಎಡಪತ್ಯ, ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಶ್ರೀಮತಿ ಸೌಮ್ಯ ,ಆರೋಗ್ಯ ಸುರಕ್ಷಧಿಕಾರಿ ಶ್ರೀಮತಿ ಪವಿತ್ರ.ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಶ್ರೀಮತಿ ನಳಿನಿ ರೈ ಉಪಸ್ಥಿತರಿದ್ದರು.

ಕಳೆದ ವರ್ಷ ಬೀಳ್ಕೊಂಡ ಪುಟಾಣಿಗಳ ಪೋಷಕರು ಅಂಗನವಾಡಿಗೆ ಪಾತ್ರೆಗಳನ್ನು ಕೊಡುಗೆ ನೀಡಿದರು. ಗಣ್ಯರಿಂದ ಪುಟಾಣಿಗಳಿಗೆ ಎಲ್.ಕೆ.ಜಿ
ಮತ್ತು ಯು.ಕೆ.ಜಿ ಪುಸ್ತಕವನ್ನು ವಿತರಣೆ ಮಾಡಲಾಯಿತು.ಪೌಷ್ಟಿಕ ಆಹಾರ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಬಹುಮಾನ ನೀಡಲಾಯಿತು. ಅಂಗನವಾಡಿ ಕೇಂದ್ರದ ಪೋಷಕರು ಸ್ತ್ರೀ ಶಕ್ತಿ ಗುಂಪಿನ ಸದಸ್ಯರು, ಬಾಲವಿಕಾಸ ಸಮಿತಿ ಸದಸ್ಯರು, ಸಂಘ ಸಂಸ್ಥೆಗಳು, ಊರಿನವರು ಈ ಕಾರ್ಯಕ್ರಮಕ್ಕೆ ಸಹಕರಿಸಿದರು.
ಅಂಗನವಾಡಿ ಪುಟಾಣಿಗಳು ಪ್ರಾರ್ಥಿಸಿದರು. ಶ್ರೀಮತಿ ನಳಿನಿ ರೈ ಸ್ವಾಗತಿಸಿ, ಮಮತಾ ಕಾಪಾಡ್ಕ ವಂದಿಸಿದರು. ಶ್ರೀನಿವಾಸ ಬೊಮ್ಮೆಟಿ ಕಾರ್ಯಕ್ರಮ ನಿರೂಪಿಸಿದರು.