ರೋಟರಿ ಕ್ಲಬ್ ಸುಳ್ಯ ಸಿಟಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

0


ರೋಟೆನ್ನರಿಯನ್ನರು ಹೃದಯ ಶ್ರೀಮಂತಿಕೆಯುಳ್ಳವರಾಗಿರಬೇಕು : ಪ್ರಕಾಶ್ ಕಾರಂತ್

ರೋಟರಿ ಕ್ಲಬ್ ಸುಳ್ಯ ಸಿಟಿ ಇದರ ಮುಂದಿನ 2025-26 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ವು ರಥಬೀದಿಯ ರೋಟರಿ ಕಮ್ಯುನಿಟಿ ಹಾಲ್ ನಲ್ಲಿ ಜು.10 ರಂದು ನಡೆಯಿತು.

ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ರೊ.ಡಾ.ರಾಮ್ ಮೋಹನ್ ಎ.ಹೆಚ್ ರವರು ನೂತನ ಪದಾಧಿಕಾರಿಗಳಿಗೆ ಪದ ಪ್ರಧಾನ ನೆರವೇರಿಸಿದರು.
ನೂತನ ಅಧ್ಯಕ್ಷ ರೊ.ಹೇಮಂತ್ ಕಾಮತ್ ಕೆ ರವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.

ಮುಖ್ಯ ಅಭ್ಯಾಗತರಾಗಿ ಪಿ.ಡಿ.ಜಿ. ರೊ. ಪ್ರಕಾಶ್ ಕಾರಂತ್, ಜಿ.ಎಸ್.ಆರ್ ರೊ.ಡಾ.ಕೇಶವ ಪಿ.ಕೆ, ಝೋನಲ್ ಲೆಫ್ಟಿನೆಂಟ್ ರೊ.ಡಾ .ಪುರುಷೋತ್ತಮ್, ಅಸಿಸ್ಟೆಂಟ್ ಗವರ್ನರ್ ರೊ.ಪ್ರಮೋದ್,
ಶ್ರೀಮತಿ ಅರ್ಚನಾ ಹೇಮಂತ್ ಕಾಮತ್,
ನಿಕಟ ಪೂರ್ವ ಅಧ್ಯಕ್ಷ ರೊ.ಶಿವಪ್ರಸಾದ್ ಕೆ.ವಿ, ಕಾರ್ಯದರ್ಶಿ ರೊ.ಸುಹಾಸ್ ಪಿ.ಜಿ, ಕೋಶಾಧಿಕಾರಿ ರೊ.ಪ್ರೀತಮ್ ಡಿ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಉರಗ ತಜ್ಞ ,ಛಾಯಚಿತ್ರಗ್ರಾಹಕ ಮೋಹನ್ ಪರಿವಾರಕಾನ ,ಇಲೆಕ್ಟ್ರೀಷಿಯನ್, ರಕ್ತದಾನಿ
ಶರತ್ ಬಿ.ಎಸ್ ರವರನ್ನು ಸನ್ಮಾನಿಸಲಾಯಿತು.
ನಿಕಟ ಪೂರ್ವ ಅಧ್ಯಕ್ಷ
ರೊ.ಶಿವಪ್ರಸಾದ್ ಕೆ.ವಿ ಮತ್ತು ಕಾರ್ಯದರ್ಶಿ ರೊ.ನವೀನ್ ಅಳಿಕೆಯವರನ್ನು ಕ್ಲಬ್ ವತಿಯಿಂದ ಅಭಿನಂದಿಸಲಾಯಿತು.
ಎ.ಜಿ ರೊ.ಪ್ರಮೋದ್ ರವರು”ಯುಕ್ತಿ” ಎಂಬ ಬುಲೆಟಿನ್ ಬಿಡುಗಡೆ ಮಾಡಿದರು.
ಕು.ಶಾರ್ವರಿ ಪ್ರಾರ್ಥಿಸಿದರು.
ರೊ. ಶಿವಪ್ರಸಾದ್ ಸ್ವಾಗತಿಸಿ, ಕಾರ್ಯದರ್ಶಿ
ರೊ.ಸುಹಾಸ್ ಪಿ.ಜಿ ವಂದಿಸಿದರು.
ರೊ.ಪ್ರೀತಮ್ ಡಿ.ಕೆ, ರೊ.ಗಿರೀಶ್ ನಾರ್ಕೋಡು ಕಾರ್ಯಕ್ರಮ ನಿರೂಪಿಸಿದರು.