ಬಾರತೀಯ ಜನತಾ ಪಕ್ಷ ದ ವತಿಯಿಂದ ಗುರು ಪೂರ್ಣಿಮೆ ದಿವಸವಾದ ಜು.10 ರಂದು ಐವತೋಕ್ಲು 3 ನೆ ಬೂತ್ ವತಿಯಿಂದ ನೇರಳ ನಿವೃತ ಶಿಕ್ಷಕ ಜನಾರ್ಧನ ರನ್ನು ಅವರ ಮನೆಗೆ ತೆರಳಿ ಸನ್ಮಾನಿಸಲಾಯಿತು. ಸನ್ಮಾನವನ್ನು ಪಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾರಾಯಣ ಕೃಷ್ಣನಗರ ರವರು ನೆರವೇರಿದರು.
















ಮಂಡಲ ಸಮಿತಿ ಸದಸ್ಯ ಲಿಗೋಧರ ಆಚಾರ್ಯ, ಶಕ್ತಿ ಕೇಂದ್ರ ಪ್ರಮುಖ ಲೋಕೇಶ್ ಬರೆಮೇಲು, ಬೂತ್ ಸಮಿತಿ ಅಧ್ಯಕ್ಷ ಚಿನ್ನಪ್ಪ ಚೋಟ್ಟೆಮಜಲು, ಪಂಜ ಸಹಕಾರ ಸಂಘದ ಮಾಜಿ ಅಧ್ಯಕ್ಷ ಗಣೇಶ್ ಪೈ, ಬೂತ್ ಸಮಿತಿ ಕಾರ್ಯದರ್ಶಿ ಪ್ರಕಾಶ್ ಜಾಕೆ ಸೋಮಶೇಖರ್ ನೇರಳ, ತೀರ್ಥಪ್ರಸಾದ್ ನೇರಳ ಮತ್ತು ಮನೆಯವರು ಉಪಸ್ಥಿತರಿದ್ದರು ಸನ್ಮಾನದ ಮಹತ್ವವನ್ನು ಮತ್ತು ಸ್ವಾಗತವನ್ನು ಲೋಕೇಶ್ ಬರೆಮೇಲು ನೆರವೇರಿಸಿದರು.










