ಎಡಮಂಗಲ ಸ.ಹಿ.ಪ್ರಾ. ಶಾಲೆಯಲ್ಲಿ ಆಂಗ್ಲ ಮಾಧ್ಯಮ (ದ್ವಿ ಭಾಷಾ) ತೆರೆಯುವ ಬಗ್ಗೆ ಸಭೆ

0

ಎಡಮಂಗಲ ಸ.ಹಿ.ಪ್ರಾ. ಶಾಲೆಯಲ್ಲಿ ಜು.10ರಂದು ಪೋಷಕರ, ಹಿರಿಯ ವಿದ್ಯಾರ್ಥಿಗಳ, ಹಾಗೂ ಊರ ದಾನಿಗಳ ಸಭೆ ನಡೆಯಿತು.


ಮುಖ್ಯ ಅತಿಥಿಗಳಾಗಿ ಶಾಲಾ ಎಸ್.ಡಿ. ಎಂ.ಸಿ ಅಧ್ಯಕ್ಷ ಭಾಸ್ಕರ್ ಆಚಾರ್ಯ, ಉಪಾಧ್ಯಕ್ಷೆ ಶ್ರೀಮತಿ ಪವಿತ್ರಾ, ಎಡಮಂಗಲ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಣ್ಣ ಜಾಲ್ತಾರು, ಎಡಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಾಮಕೃಷ್ಣ ರೈ ಮಾಲೆಂಗ್ರಿ, ಉಪಾಧ್ಯಕ್ಷರಾದ ಗಿರೀಶ್ ನಡುಬೈಲು, ಪಂಜ-ಎಣ್ಮೂರು ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಜಯಂತ್ ಕೆ, ಶಾಲಾ ನಿಕಟಪೂರ್ವ ಎಸ್.ಡಿ.ಎಂ.ಸಿ ಅಧ್ಯಕ್ಷ ಶೀನಪ್ಪ ನಾಯ್ಕ ಮುಳಿಯ, ಎಡಮಂಗಲ ಸರಕಾರಿ ಪ್ರೌಢಶಾಲಾ ಅಧ್ಯಕ್ಷ ಜನಾರ್ಧನ, ಶಾಲಾ ನಾಮ ನಿರ್ದೇಶಿತ ಸದಸ್ಯರು ಹಾಗೂ ಎಡಮಂಗಲ ಗ್ರಾ. ಪಂ. ಸದಸ್ಯರಾದ ಶ್ರೀಮತಿ ವನಿತಾ ಕಾಯ್ತಿಮಾರು, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವೀಂದ್ರ ಕಲ್ಲೆಂಬಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಎಸ್. ಡಿ.ಎಂ.ಸಿ ಸದಸ್ಯರು, ಹಿರಿಯ ವಿದ್ಯಾರ್ಥಿಗಳು, ಪೋಷಕರು, ದಾನಿಗಳು, ಶಿಕ್ಷಕ ವೃಂದ, ಅಡುಗೆ ಸಿಬ್ಬಂದಿಗಳು ಉಪಸ್ಥಿರಿದ್ದರು.


ಶಾಲಾ ಮುಖ್ಯ ಗುರುಗಳಾದ ಶ್ರೀಮತಿ ಪಾರ್ವತಿ ಬಿ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಶಿಕ್ಷಕರಾದ ಪಲ್ಲವಿ ವಂದಿಸಿದರು. ಗೌರವ ಶಿಕ್ಷಕಿ ಶ್ರೀಮತಿ ಸುಪ್ರಿತಾ ಕಾರ್ಯಕ್ರಮ ನಿರೂಪಿಸಿದರು.


ಕಾರ್ಯಕ್ರಮದಲ್ಲಿ ಮುಖ್ಯವಾಗಿ ಮಕ್ಕಳ, ಶಾಲಾ, ಊರ ಸರ್ವತೋಮುಖ ಅಭಿವೃದ್ಧಿಯ ಬಗ್ಗೆ ಚರ್ಚಿಸಿ, ಆಂಗ್ಲ ಮಾಧ್ಯಮ (ದ್ವಿ ಭಾಷಾ) ತೆರೆಯುವ ಬಗ್ಗೆ ಪ್ರಸ್ತಾಪಿಸಲಾಯಿತು. ಎಲ್ಲರ ಒಪ್ಪಿಗೆಯ ಮೇರೆಗೆ ಈ ಸಾಲಿನಿಂದಲೇ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ (ದ್ವಿ ಭಾಷಾ) ತೆರೆಯುವಂತೆ ಒಪ್ಪಿಗೆ ಸೂಚಿಸಲಾಯಿತು..
ಆಂಗ್ಲ ಮಾಧ್ಯಮಕ್ಕೆ ಶಿಕ್ಷಕರ ಕೊರತೆಯಿದ್ದು ಹೆಚ್ಚುವರಿ ಶಿಕ್ಷಕರನ್ನು ಊರ ದಾನಿಗಳ ವತಿಯಿಂದ ನೇಮಕ ಮಾಡಿಕೊಳ್ಳುವುದಾಗಿ ತೀರ್ಮಾನಿಸಲಾಯಿತು. ಸಭೆಯಲ್ಲಿ ದಾನಿಗಳಾದ ರಾಮಣ್ಣ ಜಾಲ್ತಾರು, ರಾಮಕೃಷ್ಣ ರೈ ಮಾಲೆಂಗ್ರಿ, ಚೇತನ್ ದೋಳ್ತಿಲ, ಶೀನಪ್ಪ ನಾಯ್ಕ್ ಮುಳಿಯ, ವನಿತಾ ಕಾಯ್ತಿಮಾರು, ಗಿರೀಶ್ ನಡುಬೈಲ್, ಶಿವಕುಮಾರ್ ಭಟ್ ನಡುಬೈಲ್,
ಪ್ರಾ. ಕೃ. ಪ. ಸ. ಸಂಘ ಎಡಮಂಗಲ, ವಿ. ಹಿಂ. ಪ. ಬಜರಂಗದಳ ಎಡಮಂಗಲ ಘಟಕ ಮುಂತಾದವರು ಸಹಾಯಧನವನ್ನು ಘೋಷಣೆ ಮಾಡಿದರು.