
ಆಷಾಢ ಹುಣ್ಣಿಮೆಯ ಶುಭ ದಿನ ಜು.10 ರಂದು ಸುಳ್ಯ ರೋಟರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳು ವಿನೂತನ ರೀತಿಯಲ್ಲಿ ಗುರು ಪೂರ್ಣಿಮಾ ಸಂಭ್ರಮಾಚರಣೆಯನ್ನು ಆಯೋಜಿಸಿದರು. ಪ್ರೌಢ ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಆರತಿ ಎತ್ತಿ, ಅರ್ಚನೆ ಮಾಡಿ ,ಅರಿಶಿನ ಕುಂಕುಮ ನೀಡಿ, ಬರಮಾಡಿಕೊಂಡರು.
ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಶೇಡಿಕಜೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ , ಶುಭ ಹಾರೈಸಿದರು.















ವಿದ್ಯಾರ್ಥಿನಿ ಕುಮಾರಿ ವಂದಿತಾ ವಿ.ಎಸ್. ದಿನದ ಮಹತ್ವದ ಬಗ್ಗೆ ಮಾತನಾಡಿದರು.ಸಹ ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ಕಲ್ಮಡ್ಕ ವ್ಯಾಸ ಪೂರ್ಣಿಮೆ, ಬುದ್ಧ ಪೂರ್ಣಿಮೆಯ ಹಿಂದಿನ ಮಹತ್ವವನ್ನು ವರ್ಣಿಸಿ, ಗುರು ಶಿಷ್ಯ ಪರಂಪರೆ, ಹಾಗು ಗುರುಗಳ ಮಾರ್ಗದರ್ಶನದ ಹಿರಿಮೆಯನ್ನು ತಿಳಿಸಿದರು.

ಕು.ಪೂರ್ವಿಕ, ಕು.ವಂದಿತಾ, ಕು.ನಿರೀಕ್ಷಾ, ಕು.ಗಾನವಿ ಸಮೂಹ ಗಾಯನ ಪ್ರಸ್ತುತ ಪಡಿಸಿದರು.
ಕುಮಾರಿ ದೃಶ್ಯಾ.ಎಸ್ ಸ್ವಾಗತಿಸಿ. ಕು. ರಕ್ಷಾ ವಂದಿಸಿದರು. ಕು.ಮೇಘನ ಹಾಗೂ ಕು.ಅಪೂರ್ವ ಪ್ರಾರ್ಥಿಸಿದರು.

ವಿದ್ಯಾರ್ಥಿಗಳಾದ ಅಹನ್ ಕುಮಾರ್ ಹಾಗೂ ಕು.ಹರಿಕ ಕಾರ್ಯಕ್ರಮ ನಿರೂಪಿಸಿದರು. ಶಾಲಾ ನಾಯಕಿ
ಕು. ಅನನ್ಯ ಕೆ.ವಿ , ಉಪನಾಯಕಿ ಕು. ಅನುಷ್ಕಾ ಹಾಗೂ ವಿದ್ಯಾರ್ಥಿ ಸಂಸತ್ತಿನ ಎಲ್ಲ ಸದಸ್ಯರು , ವಿದ್ಯಾರ್ಥಿಗಳು ಕಾರ್ಯಕ್ರಮ ಅಚ್ಚುಕಟ್ಟಾಗಿ ಆಯೋಜಿಸಿದರು.










