ಜಾಲ್ಸೂರು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ನಿವೃತ್ತ ಶಿಕ್ಷಕ ಕಾಳಮ್ಮನೆ ಕಾಂತಪ್ಪ ಮಾಸ್ಟರ್ ಮತ್ತು ಯಮುನಾ ದಂಪತಿಗಳಿಗೆ ಗುರುವಂದನೆ

0

ಜಾಲ್ಸುರು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ನಿವೃತ್ತ ಶಿಕ್ಷಕ ಕಾಂತಪ್ಪ ಮಾಸ್ಟರ್ ಕಾಳಮ್ಮನೆ ಮತ್ತು ಯಮುನಾ ದಂಪತಿಗಳಿಗೆ ಗುರುವಂದನೆ ಕಾರ್ಯಕ್ರಮ ಗುರುಪೂರ್ಣಿಮೆ ದಿನವಾದ ಜು. 10 ರಂದು ಅವರ ಮನೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಮುಖರಾದ ಜಯರಾಮ ರೈ ಜಾಲ್ಸೂರು,
ಡಾ. ಗೋಪಾಲಕೃಷ್ಣ ಭಟ್, ಸುಭೋದ್ ಶೆಟ್ಟಿ ಮೇನಾಲ, ಸಾವಿತ್ರಿ ಅಡ್ಕಾರು, ಹೇಮಂತ್ ಮಠ, ಶಂಕರ್ ಪೆರಾಜೆ, ಶರತ್ ಕದಿಕಡ್ಕ, ರಜತ್ ಅಡ್ಕಾರು, ರವಿರಾಜ ಗಬಲಡ್ಕ, ತಿಮ್ಮಯ್ಯ ಆಚಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.