














ರಾಜ್ಯ ಸರ್ಕಾರದ ಅವಿವೇಕಿ ನಡವಳಿಕೆಗಳಿಂದಾಗಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕೆಂಪುಕಲ್ಲು ಮತ್ತು ಹೊಯ್ಗೆ ಅಲಭ್ಯವಾಗಿದ್ದು ಪರಿಣಾಮವಾಗಿ ನಿರ್ಮಾಣ ಕಾಮಗಾರಿಗಳು ಸಂಪೂರ್ಣ ಸ್ಥಗಿತಗೊಂಡಿವೆ. ಇದರಿಂದಾಗಿ ಕಟ್ಟಡ ನಿರ್ಮಾಣ ಕಾರ್ಮಿಕರು, ಲಾರಿ ಚಾಲಕಮಾಲಕರು ತೀರಾ ಸಂಕಷ್ಟಕ್ಕೊಳಗಾಗಿದ್ದು ಮಳೆಗಾಲದ ಈ ದಿನಗಳಲ್ಲಿ ಜನರು ಬೀದಿಗೆ ಬೀಳುವಂತಾಗಿದೆ. ಅಧಿಕಾರಕ್ಕೆ ಬಂದು ಎರಡು ವರ್ಷಗಳು ಕಳೆದರೂ ಸರಿಯಾದ ಮರಳು ನೀತಿ ರೂಪಿಸದೆ, ಕೆಂಪು ಕಲ್ಲು ಗಣಿಗಾರಿಕೆಗೆ ಸೂಕ್ತ ನಿಯಮಗಳನ್ನು ರೂಪಿಸದೆ ಇದೀಗ ಅಕ್ರಮದ ಹೆಸರಿನಲ್ಲಿ ಎಲ್ಲಾ ಚಟುವಟಿಕೆಗಳನ್ನು ನಿಲ್ಲಿಸಿರುವುದರಿಂದ ಮರಳಿನ ಬೆಲೆ ಗಗನಕ್ಕೇರಿದೆ. ಕೆಂಪು ಕಲ್ಲಿನ ಬೆಲೆ ದ್ವಿಗುಣಗೊಂಡಿದೆ. ಭಾರತೀಯ ಜನತಾ ಪಾರ್ಟಿಯು ಜನರ ಈ ಸಮಸ್ಯೆಯ ಕುರಿತು ಹಲವು ವೇದಿಕೆಗಳಲ್ಲಿ ಧ್ವನಿಯೆತ್ತಿದ್ದರೂ ಸರಕಾರ ಸಮಸ್ಯೆ ನಿವಾರಣೆ ಮಾಡುತ್ತಿಲ್ಲ.
ಹಾಗಾಗಿ ಜಿಲ್ಲೆಯ ಜನ ಬೀದಿಗಿಳಿಯುವುದು ಅನಿವಾರ್ಯವಾಗಿದ್ದು ಜುಲೈ 14 ರ ಸೋಮವಾರ ಜಿಲ್ಲೆಯಾದ್ಯಂತ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯಲಿದೆ. ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ ಮತ್ತು ಸುಳ್ಯ 2 ತಾಲೂಕು ಕೇಂದ್ರಗಳ ಲ್ಲಿ ಪೂರ್ವಾಹ್ನ 9:30ಕ್ಕೆ ಪ್ರತಿಭಟನೆ ನಡೆಯಲಿದೆಯೆಂದು ಸುಳ್ಯ ಮಂಡಲ ಬಿ.ಜೆ.ಪಿ. ಅಧ್ಯಕ್ಷ ವೆಂಕಟ್ ವಳಲಂಬೆ ತಿಳಿಸಿದ್ದಾರೆ.









