ಪೈಚಾರ್: ಅಲ್-ಅಮೀನ್ ಯೂತ್ ಸೆಂಟರ್ ವತಿಯಿಂದ ಆಧಾರ್ ಶಿಬಿರ

0

ಪೈಚಾರ್ ಅಲ್ ಅಮೀನ್ ಯೂತ್ ಸೆಂಟರ್ ವತಿಯಿಂದ ಜು. ೧೧ ರಂದು ಸಂಸ್ಥೆಯ ಕಚೇರಿಯಲ್ಲಿ ಆಧಾರ್ ಶಿಬಿರ ನಡೆಯಿತು.

ಭಾರತೀಯ ಅಂಚೆ ಸೇವೆ ಸುಳ್ಯ ಉಪವಿಭಾಗದ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮದ ಪ್ರಯೋಜನವನ್ನು ನೂರಾರು ಮಂದಿ ಫಲಾನುಭವಿಗಳು ಪಡೆದುಕೊಂಡರು.
ಶಿಬಿರದ ಉದ್ಘಾಟನೆಯನ್ನು ಹನೀಫ್ ಪಿ ಕೆ. ಪ್ರಧಾನ ಕಾರ್ಯದರ್ಶಿ ಬದ್ರಿಯಾ ಜುಮಾ ಮಸ್ಟಿದ್ ಪೈಚಾರ್ ಇವರು ನೆರವೇರಿಸಿದರು.


ಅಧ್ಯಕ್ಷತೆಯನ್ನು ಅಲ್-ಅಮೀನ್ ಯೂತ್ ಸೆಂಟರ್ ನ ಅಧ್ಯಕ್ಷ ಅಬ್ದುಲ್ ಸತ್ತಾರ್ ಪಿ.ಎ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಭಾಗ ವಹಿಸಿದ್ದ ಸುಳ್ಯ ಅಂಚೆ ಕಚೇರಿಯ ಅಂಚೆ ಪಾಲಕರಾದ ಮೋಹನ್ ಎಂ ರವರು ಶಿಬಿರದ ಬಗ್ಗೆ ಮಾತನಾಡಿ ‘ ಪೈಚಾರ್ ಅಲ್ ಅಮೀನ್ ಯೂತ್ ಸೆಂಟರ್ ಈ ಒಂದು ಶಿಬಿರ ವನ್ನು ಬಹಳ ಉತ್ತಮ ರೀತಿಯಲ್ಲಿ ಆಯೋಜಿಸಿದ್ದು ಇದರಿಂದ ಈ ಭಾಗದ ನೂರಾರು ಮಂದಿ ಫಲಾನುಭವಿಗಳಿಗೆ ಪ್ರಯೋಜನ ವಾಗಲಿದೆ. ಅಲ್ಲದೆ ಈ ಒಂದು ಕಾರ್ಯಕ್ರಮದ ಯಶಸ್ವಿಗೆ ಸಂಸ್ಥೆಯ ಎಲ್ಲಾ ಸದಸ್ಯರುಗಳು ಕೂಡ ಶ್ರಮ ವಹಿಸಿದ್ದಾರೆ. ಇಂತಹ ಕಾರ್ಯಕ್ರಮಗಳು ಸಂಘ ಸಂಸ್ಥೆ ವತಿಯಿಂದ ನಡೆಯಬೇಕು ಅದರಿಂದ ಜನರಿಗೆ ಸಹಕಾರಿ ಆಗುತ್ತದೆ ಎಂದು ಹೇಳಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ಮುಜೀಬ್ ಪೈಚಾರ್, ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ರಿಫಾಯಿ,ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಆರ್.ಬಿ.ಬಶೀರ್,ದ್ವನಿ ಬೆಳಕು ಮತ್ತು ಶಾಮಿಯಾನ ಸಂಘದ ಸಂಘಟನಾ ಕಾರ್ಯದರ್ಶಿ ಶಾಫಿ ಪ್ರಗತಿ, ಅಲ್ ಅಮೀನ್ ಮಾಜಿ ಅಧ್ಯಕ್ಷ ಅಶ್ರಫ್ ಅಚ್ಚಪ್ಪು, ಉಪಾಧ್ಯಕ್ಷ ಹನೀಫ್ ಅಲ್ಫ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಂಸ್ಥೆ ವತಿಯಿಂದ ಅಂಚೆ ಪಾಲಕರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸ್ಥಳೀಯ ನೂರಾರು ಮಂದಿ ಶಿಬಿರದಲ್ಲಿ ಭಾಗವಹಿಸಿ ಸರಥಿ ಸಾಲಿನಲ್ಲಿ ನಿಂತು ಆಧಾರ್ ಸಂಭಂದಿತ ನೋಂದಣಿ, ತಿದ್ದುಪಡಿ, ವಿಳಾಸ ಬದಲಾವಣೆ ಮುಂತಾದ ಕೆಲಸ ಕಾರ್ಯಗಳನ್ನು ಮಾಡಿಸಿಕೊಂಡರು.

ಮುಜೀಬ್ ಪೈಚಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿದರು.
ಪ್ರಧಾನ ಕಾರ್ಯದರ್ಶಿ ಅಬುಸಾಲಿ ವಂದಿಸಿ ಎಲ್ಲಾ ಸದಸ್ಯರುಗಳು ಸಹಕರಿಸಿದರು.