ಜು.14ರಂದು ಸುಳ್ಯದಲ್ಲಿ ಶಕ್ತಿ ಸಂಭ್ರಮಾಚರಣೆ : ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ















ಕರ್ನಾಟಕ ಸರಕಾರದ ಬಹು ನಿರೀಕ್ಷಿತ ಮತ್ತು ಮಹತ್ವಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯ ಪಲಾನುಭವಿಗಳ ಸಂಖ್ಯೆ 500 ಕೋಟಿ* ಗಡಿಯನ್ನು ದಾಟಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ
ಶಕ್ತಿ – ಸಂಭ್ರಮಾಚಾರಣೆ ಕಾರ್ಯಕ್ರಮ ಜು.14ರಂದು ಸೋಮವಾರ ನಡೆಯಲಿದೆ.
ಸುಳ್ಯದಲ್ಲಿ ಜು.14ರಂದು ಪೂ. 10.30ಕ್ಕೆ ಸುಳ್ಯ ಸರಕಾರಿ ಬಸ್ಸು ನಿಲ್ದಾಣದಲ್ಲಿ ಶಕ್ತಿ ಸಂಭ್ರಮಾಚರಣೆ ನಡೆಯಲಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ತಿಳಿಸಿದ್ದಾರೆ.



