ಅರಂತೋಡು ಘನ ತಾಜ್ಯ ಘಟಕಕ್ಕೆ ಬೆಂಕಿ ಅವಘಡ

0

ಶಾಸಕರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭೇಟಿ, ಪರಿಶೀಲನೆ

ಬೆಂಕಿ ಅವಘಡ ಸಂಭವಿಸಿದ ಅರಂತೋಡು ಘನ ತಾಜ್ಯ ಘಟಕಕ್ಕೆ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕರು ಕು. ಭಾಗೀರಥಿ ಮುರುಳ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನರ್ವಡೆ ವಿನಾಯಕ್‌ ಕಾರ್ಭಾರಿಯವರು ಜುಲೈ 11 ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಳಿಕ ಅವರುಗಳು ಪ್ರಕರಣ ಬಗ್ಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ನೂತನ ಘನ ತಾಜ್ಯ ನಿರ್ಮಾಣ , ಹಾಗೂ ಶೀಘ್ರವೇ ಸರಕಾರದ ಗಮನಕ್ಕೆ ತಂದು ಅನುದಾನವನ್ನು ಕೊಡಿಸುವ ಪ್ರಯತ್ನ ಮಾಡಲಾಗುವುದು ಎಂದುಅಧಿಕಾರಿಗಳು ಭರವಸೆ ನೀಡಿರುವುದಾಗಿ ತಿಳಿದು ಬಂದಿದೆ.

ಈ ಸಂದರ್ಭದಲ್ಲಿ ಮಾತನಾಡಿರುವ ಶಾಸಕರು ಈ ಘಟಕವು ದೇಶದ ಮಾದರಿ ಘನತಾಜ್ಯ ನಿರ್ವಹಣಾ ಘಟಕವಾಗಿ ಸುಳ್ಯಕ್ಕೆ ಗರಿಮೆಯನ್ನು ತಂದುಕೊಟ್ಟಿತು. ಅದರೆ ಈ ದುರಂತದಿಂದ ಬಹಳಷ್ಟು ನಷ್ಟ ಉಂಟಾಗಿದೆ ಸರಕಾರದಿಂದ ಯಾವುದಾದರೂ ಅನುದಾನವನ್ನು ಕೊಡಿಸುವ ಪ್ರಯತ್ನವನ್ನು ಮಾಡುತ್ತೆನೆ ಎಂದು ತಿಳಿಸದ್ದಾರೆ.

ಸುಳ್ಯ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ, A. E. E ಗಳಾದ ಫಯಾಜ್, ಚೈತ್ರ , ಮಣಿಕಂಠ, ಅರಂತೋಡು ಗ್ರಾಮ ಪಂಚಾಯತ್
ಅಧ್ಯಕ್ಷ ಕೇಶವ ಅಡ್ತಲೆ, ಉಪಾಧ್ಯಕ್ಷರಾದ ಭವಾನಿ ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಂ. ಆರ್. ಅರಂತೋಡು ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ ಕುತ್ತಮೊಟ್ಟೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಹರೀಶ್ ಕಂಜಿಪಿಲಿ, ಸತೀಶ್ ನಾಯ್ಕ್, ಪಂಚಾಯತ್ ಸದಸ್ಯರಾದ ವೆಂಕಟರಮಣ ಪೆತ್ತಾಜೆ, ಸ್ಥಳೀಯ ಮುಖಂಡರಾದ ಸೋಮಶೇಖರ್ ಪೈಕ, ಭಾರತಿ ಪುರುಷೋತ್ತಮ್ ಉಳುವಾರು, ಸ್ವಚ್ಛತಾ ಘಟಕದ ಸಿಬ್ಬಂದಿಗಳು, ಮತ್ತು ಪಂಚಾಯತ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.