ಕೋಲ್ಚಾರು ಬಿಜೆಪಿ ವತಿಯಿಂದಗುರುಪೂರ್ಣಿಮೆಯ ಪ್ರಯುಕ್ತ ಜು.10 ರಂದು ಊರಿನ ನಿವೃತ್ತ ಶಿಕ್ಷಕರಾದ ರಾಮಪ್ಪ ಮಾಸ್ತರ್ ಹಾಗೂ ನಿವೃತ ಶಿಕ್ಷಕಿ ಶ್ರೀಮತಿ ನಾಗವೇಣಿ ಕೊಯಿಂಗಾಜೆ ಯವರ ಮನೆಗೆ ತೆರಳಿ ಗುರು ವಂದನೆ ಸಲ್ಲಿಸಿ ಗೌರವಿಸಲಾಯಿತು.
















ಈ ಸಂದರ್ಭದಲ್ಲಿ ಜಾಲ್ಸೂರು ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಸುದರ್ಶನ ಪಾತಿಕಲ್ಲು, ಗ್ರಾಮ ಪಂಚಾಯಿತಿ ಸದಸ್ಯ ದಿನೇಶ್ ಕಣಕ್ಕೂರು,ಆಲೆಟ್ಟಿ ಸೊಸೈಟಿ ನಿರ್ದೇಶಕ ಚಿದಾನಂದ ಕೋಲ್ಚಾರು, ಬಿಜೆಪಿ ಯುವ ಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕೊಲ್ಲರಮೂಲೆ,ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಯತಿರಾಜ್ ಕೊಯಂಗಾಜೆ, ಬೂತ್ ಸಮಿತಿ ಕಾರ್ಯದರ್ಶಿ ಪ್ರಣೀತ್ ಕಣಕ್ಕೂರು, ಪಕ್ಷದ ಕಾರ್ಯಕರ್ತರಾದ ವಾಮನ ಕೊಯಂಗಾಜೆ, ಲಕ್ಷ್ಮಣ ಕಣಕ್ಕೂರು,ಪ್ರದೀಪ್ ಕೊನ್ನೋಡಿ, ಗಂಗಾಧರ ಕೊಲ್ಲರಮೂಲೆ,ಮನೋಜ್ ಕೊಯಿಂಗಾಜೆ, ಗಣೇಶ್ ಕಣಕ್ಕೂರು ಉಪಸ್ಥಿತರಿದ್ದರು.










