ಅರಂತೋಡು : ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿಯ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ

0

ಅರಂತೋಡು ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿಯ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ .ಮಂದಿರದ ಅಧ್ಯಕ್ಷರಾದ ಕೆ ಆರ್ ಪದ್ಮನಾಭ ಕುರುಂಜಿ ಇವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಅಮೃತ ಭವನದಲ್ಲಿ ಜುಲೈ 6 ರಂದು ನಡೆಸಲಾಯಿತು.


ಭಜನಾ ಮಂದಿರದ ಕಾರ್ಯದರ್ಶಿ ತೀರ್ಥರಾಮ ಆಡ್ಕಬಳೆ ಪ್ರಸ್ತಾವಿಕವಾಗಿ ಮಾತನಾಡಿ ಹಿಂದಿನ ವಾರ್ಷಿಕ ವರದಿಯನ್ನು ಮಂಡಿಸಿದರು, ನಂತರ ಹೊಸ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಗೌರವಧ್ಯಕ್ಷರಾಗಿ ಕೆ ಆರ್ ಪದ್ಮನಾಭ, ಅಧ್ಯಕ್ಷರಾಗಿ ತೀರ್ಥರಾಮ ಆಡ್ಕಬಳೆ, ಕಾರ್ಯದರ್ಶಿಯಾಗಿ ಸುರೇಶ ಉಳುವಾರು, ಉಪಾಧ್ಯಕ್ಷರಾಗಿ ಕುಶಾಲಪ್ಪ ಬೆಟ್ಟನ, ಕೋಶಾಧಿಕಾರಿಯಾಗಿ ಕೆ ಆರ್ ಪುಂಡರಿಕ ಕಲ್ಲುಗದ್ದೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೇಶವ ಅಡ್ತಲೆ, ಸೋಮಶೇಖರ್ ಪೈಕ ಹಾಗೂ ಭಾರತಿ ಪುರುಷೋತ್ತಮ ಉಳುವಾರು ಹಾಗೂ 13 ನಿರ್ದೇಶಕರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ನಿವೃತ ಪ್ರಾಂಶುಪಾಲರಾದ ಕೆ ಆರ್ ಗಂಗಾಧರ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ ಸಲಹೆ ಸೂಚನೆ ಗಳನ್ನು ಇತ್ತರು, ಸಭೆಯಲ್ಲಿ ಮಂದಿರ ದ ಭಜಕರು ಊರಿನ ಭಕ್ತರು ಮಂದಿರದ ಪದಾಧಿಕಾರಿಗಳು ಉಪಸ್ಥಿತರಿದ್ದರು ವೇದಿಕೆಯಲ್ಲಿ ತಾಲೂಕು ಭಜನಾ ಪರಿಷತ್ ಅಧ್ಯಕ್ಷರಾದ ಸೋಮಶೇಖರ್ ಪೈಕ ಸಂಪಾಜೆ ವಲಯ ಭಜನಾ ಪರಿಷತ್ ಅಧ್ಯಕ್ಷರಾದ ಭಾರತಿ ಪುರುಷೋತ್ತಮ ಉಳುವಾರು ಉಪಸ್ಥಿತರಿದ್ದರು. ಮಂದಿರದ ಕಾರ್ಯದರ್ಶಿ ತೀರ್ಥರಾಮ ಆಡ್ಕಬಳೆ ವಂದಿಸಿದರು.