ಸ. ಹಿ. ಪ್ರಾ. ಶಾಲೆ ಅಡ್ಪಂಗಾಯ 2025-26ರಲ್ಲಿ ದ್ವಿಭಾಷಾ ಶಾಲೆಯು ಆಯ್ಕೆಯಾಗಿದ್ದು, ಈ ದಿನ ಒಂದನೇ ಆಂಗ್ಲಮಾಧ್ಯಮ ತರಗತಿ ಉದ್ಘಾಟನಾ ಕಾರ್ಯಕ್ರಮವನ್ನು ನಡೆಸಲಾಯಿತು.

ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಅಬ್ಬಾಸ್ ಎ. ಬಿ.ರವರ ಸಭಾಧ್ಯಕ್ಷತೆಯಲ್ಲಿ ಅಜ್ಜಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ದೇವಕಿ ದೀಪ ಬೆಳಗಿ ಉದ್ಘಾಟಿಸಿದರು.















ವೇದಿಕೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಶ್ರೀಮತಿ ಲೀಲಾ ಮನಮೋಹನ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಹುಲ್ ಅಡ್ಪಂಗಾಯ, ಅಜ್ಜಾವರ ಗ್ರಾಮ ಪಂಚಾಯತ್ ಸದಸ್ಯರಾದ ಬೇಬಿ ಕಲ್ತಡ್ಕ, ಜಿಲ್ಲಾ ಎಸ್.ಡಿಎಂ.ಸಿ ಸಮನ್ವಯ ಸಮಿತಿ ಸದಸ್ಯ ಶೌಕತ್ ಅಲಿ,
ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಸುರೇಖಾ ರೈ. ಡಿ ಉಪಸ್ಥಿತರಿದ್ದರು.
ಶಿಕ್ಷಕಿ ಶ್ರೀಮತಿ ಕಲಾವತಿ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ನರ್ಮದಾ ವಂದಿಸಿದರು. ಶ್ರೀಮತಿ ಸ್ವಪ್ನ ಮತ್ತು ಶ್ವೇತಾ ಕಾರ್ಯಕ್ರಮ ನಿರೂಪಿಸಿದರು.










