ಸುಳ್ಯ ಕಸಾಪ ವತಿಯಿಂದ ಪರಿಸರ ಜಾಗೃತಿಯಾನ ಸರಣಿ ಕಾರ್ಯಕ್ರಮಗಳಿಗೆ ಚಾಲನೆ

0

ವಿದ್ಯಾರ್ಥಿಗಳು ಪ್ರಕೃತಿಯ ಸ್ನೇಹಿತರಾಗಬೇಕು- ಡಾ.ಆರ್.ಕೆ.ನಾಯರ್

ಪರಿಸರವೆಂದರೆ ಕೇವಲ ಗಿಡ ಮರ ಮಾತ್ರವಲ್ಲ. ಪ್ರಕೃತಿಯೇ ಪರಿಸರ. ಪ್ರಕೃತಿಯನ್ನು ಪ್ರೀತಿಸಿದಾಗ, ಅದರೊಂದಿಗೆ ಸ್ನೇಹ ವನ್ನು ಬೆಳೆಸಿದಾಗ ಪ್ರಕೃತಿ ನಮ್ಮನ್ನು ಕಾಪಾಡುತ್ತದೆ ಎಂದು ಪರಿಸರ ತಜ್ಞ, ಗ್ರೀನ್ ಹೀರೋ ಆಫ್ ಇಂಡಿಯಾ ಡಾ.ಆರ್.ಕೆ.ನಾಯರ್ ಅಭಿಪ್ರಾಯಪಟ್ಟರು.
ಅವರು ಜು.14 ರಂದು ಸುಳ್ಯ ಸ.ಪ.ಪೂ.ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಇಕೋ ಕ್ಲಬ್ ನ ಸಹಯೋಗದಲ್ಲಿ ನಡೆದ ಪರಿಸರ ಜಾಗೃತಿಯಾನ, ಪರಿಸರ ಗೀತೆ ಗಾಯನ ಹಾಗೂ ಔಷಧ ಸಸ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸ್ಪರ್ಧಾ ಸರಣಿ ಕಾರ್ಯಕ್ರಮ ಗಳನ್ನು ಉದ್ಘಾಟಿಸಿ ಮಾತನಾಡಿದರು.
ಕೃಷಿ ಕ್ಷೇತ್ರಕ್ಕೆ ವಿಷ ಬರೆಸುವ ಕೆಲಸ ಮಾಡಬೇಡಿ. ಪ್ರಕೃತಿ ಮುನಿಸಿಕೊಂಡರೆ ಆ ದುರಂತವನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲವೆಂಬುದು ಇತ್ತೀಚೆಗಿನ ಪ್ರಕರಣವೇ ಸಾಕ್ಷಿ.ಪ್ರಕೃತಿಯ ವಿರುದ್ಧ ಹೋಗಿ ಬೇಕುಂತಲೇ ವಿಕೋಪಗಳನ್ನು ತರಿಸಿಕೊಳ್ಳುತ್ತೇವೆ ಎಂದ ಅವರು ಸಣ್ಣ ಗಾತ್ರದ ಇರುವೆ ಯನ್ನು ಸಂರಕ್ಷಣೆಯನ್ನು ಮಾಡಿದರೆ ಆನೆಯನ್ನು ಸಂರಕ್ಷಣೆ ಮಾಡಿದಂತೆ, ಅದರಂತೆ ಗಿಡಗಳನ್ನು‌ ರಕ್ಷಣೆ ಮಾಡಿ ಮರಗಳು ಅದರಷ್ಟಕ್ಕೆ ಉಳಿಯುತ್ತದೆ.ಪ್ರಕೃತಿ ಸಂರಕ್ಷಣೆಗೆ ನಮ್ಮ ಭಾವನೆ ಮುಖ್ಯ ಎಂದು ಹೇಳಿದರು.

ಸಭಾಧ್ಯಕ್ಷತೆಯನ್ನು ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲು ವಹಿಸಿದ್ದರು. ಅತಿಥಿಯಾಗಿದ್ದ ಸುಳ್ಯ ವಲಯಾರಣ್ಯಾಧಿಕಾರಿ ಎನ್.ಮಂಜುನಾಥ್ ಶುಭ ಹಾರೈಸಿದರು.


ವೇದಿಕೆಯಲ್ಲಿ ಕಾಲೇಜಿನ ಉಪಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ, ಹಿರಿಯ ಶಿಕ್ಷಕ ಡಾ.ಸುಂದರ್ ಕೇನಾಜೆ, ಎಸ್.ಡಿ.ಎಂ.ಸಿ.ಅಧ್ಯಕ್ಷೆ ಶ್ರೀಮತಿ ಮಂಜುಳಾ ಬಡಿಗೇರ್, ಉಪಾಧ್ಯಕ್ಷ ಹಸೈನಾರ್ ಜಯನಗರ, ಕಸಾಪ ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಲ್ಲತಡ್ಕ, ತಾ.ಘಟಕದ ಗೌ.ಕೋಶಾಧಿಕಾರಿ ದಯಾನಂದ ಆಳ್ವ, ಇಕೋ ಕ್ಲಬ್ ನ ಸಂಚಾಲಕಿ ಶ್ರೀಮತಿ ಪೂರ್ಣಿಮಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಡಾ.ಆರ್.ಕೆ‌.ನಾಯರ್ ಮತ್ತು ಎನ್.ಮಂಜುನಾಥ ರವರನ್ನು ಗೌರವಿಸಲಾಯಿತು.


ಗಾಯಕಿಯರಾದ ಶುಭದಾ ಆರ್‌.ಪ್ರಕಾಶ್ ಮತ್ತು ಲಿಪಿಶ್ರೀ ಪರಿಸರ ಗೀತೆ ಗಾಯನ ಮಾಡಿದರು.
ಕಾರ್ಯಕ್ರಮದಲ್ಲಿ ರಾಮಚಂದ್ರ ಪಲ್ಲತ್ತಡ್ಕ ಸ್ವಾಗತಿಸಿ, ಶ್ರೀಮತಿ ಪೂರ್ಣಿಮ ವಂದಿಸಿದರು. ಕಸಾಪ ಗೌ.ಕಾರ್ಯದರ್ಶಿ ,ಶಿಕ್ಷಕಿ ಶ್ರೀಮತಿ ಚಂದ್ರಮತಿ ಕಾರ್ಯಕ್ರಮ ನಿರೂಪಿಸಿದರು. ಕಸಾಪ ನಿರ್ದೇಕರಾದ ಕೇಶವ ಸಿ.ಎ.,ರಮೇಶ್ ನೀರಬಿದಿರೆ, ಲತಾಶ್ರೀ ಸುಪ್ರೀತ್ ಮೋಂಟಡ್ಕ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.