ಕರಿಕ್ಕಳದಲ್ಲಿ ಅಂಗಡಿಗೆ ನುಗ್ಗಿ ಹಣ ಕಳ್ಳತನ ಪ್ರಕರಣ-ಆರೋಪಿ ಪೋಲೀಸ್ ವಶ

0

ಐವತ್ತೊಕ್ಲು ಗ್ರಾಮದ ಕರಿಕ್ಕಳದಲ್ಲಿರವ ಜತ್ತಪ್ಪ ಗೌಡ ಮೇಲ್ಮನೆ ರವರ ಅಂಗಡಿಯಲ್ಲಿ ಜು.9 ರಂದು ರಾತ್ರಿ ಸುಮಾರು 25 ಸಾವಿರ ನಗದು ಕಳ್ಳತನ ಆಗಿತ್ತು. ಅಂದು ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ
ಜು.15 ರಂದು ಕಿನ್ನಿಗೋಳಿ ಸಮೀಪದ ನಿವಾಸಿಯಾಗಿರುವ ಕಳ್ಳನ ಪತ್ತೆ ಹಚ್ಚಿ ವಶಕ್ಕೆ ಪಡೆದಿರುವ ಮಾಹಿತಿ ಲಭ್ಯವಾಗಿದೆ.