ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ಸಂಪಾಜೆ ಶಾಖಾ ಕಚೇರಿ ವ್ಯಾಪ್ತಿಯ ಗ್ರಾಹಕರ ಸಂಪರ್ಕ ಮತ್ತು ಮಾಹಿತಿ ಸಭೆಯು ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಜು.14 ರಂದು ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕೆಡಿಸಿಸಿ ಬ್ಯಾಂಕ್ ಅದ್ಯಕ್ಷರಾದ ಶ್ರೀ.ಕೊಡಂದೇರ ಪಿ.ಬಾಂಡ್ ಗಣಪತಿರವರು ಗ್ರಾಹಕರ ಜೊತೆ ಸಂವಾದ ನಡೆಸಿ , ಬ್ಯಾಂಕ್ ಒದಗಿಸುತ್ತಿರುವ ಸಾಲ ಸೌಲಭ್ಯಗಳು, ಕೆಸಿಸಿ ಸಾಲಗಳು, ಸಾಮಾನ್ಯ ಅಡಮಾನ ಮುಂತಾದ ವಿಷಯಗಳ ಸ್ಪಷ್ಟ ಚಿತ್ರಣ ನೀಡಿದರು.















ಪಯಸ್ವಿನಿ ಸೊಸೈಟಿ ಅಧ್ಯಕ್ಷರಾದ ಯನ್.ಸಿ.ಅನಂತ್ ರವರು ಮಾತನಾಡಿ ರೈತರು ತಮ್ಮ ಭೂ ದಾಖಲಾತಿಗಳನ್ನು ಸರಿಪಡಿಸಿಕೊಳ್ಳುವ ಅನಿವಾರ್ಯತೆ ಬಗ್ಗೆ ವಿವರಿಸಿದರು.
ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಂ.ಸಿ.ನಾಣಯ್ಯರವರು ಬ್ಯಾಂಕ್ ನ ಸಾಧನೆಗಳ ಬಗ್ಗೆ ಮಾತನಾಡಿದರು.
ಬ್ಯಾಂಕ್ ನ ಸಂಪಾಜೆ ಶಾಖಾ ಮ್ಯಾನೇಜರ್ ಶ್ರೀಮತಿ ವಿನುತಾ ರವರು ಸ್ವಾಗತಿಸಿ ,ಹಿರಿಯ ಮೇಲ್ವಿಚಾರಕರಾದ ಹರೀಶ್ ವಿ.ಜಿ ರವರು ವಂದಿಸಿದರು. ಸಂಪಾಜೆ ಮತ್ತು ಚೆಂಬು ಸೊಸೈಟಿ ನಿರ್ದೇಶಕರು ,ಸಿಬ್ಬಂದಿಗಳು, ಸಂಪಾಜೆ, ಚೆಂಬು ಮತ್ತು ಪೆರಾಜೆ ಗ್ರಾಮದ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.










