ನಿರ್ಮಾಣ ಹಂತದಲ್ಲಿರುವ
ಬೆಳ್ಳಾರೆಯ ಗೌರಿಪುರಂ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಜು. 15ರಂದು ಭೇಟಿ ನೀಡಿ ಪರಿಸರವನ್ನು ವೀಕ್ಷಿಸಿದರು. ಬಳಿಕ ನಡೆದ ಸಭೆಯಲ್ಲಿ ದೇವಸ್ಥಾನ ನಿರ್ಮಾಣಕ್ಕೆ ದಾನಿಗಳಿಂದ ಆರ್ಥಿಕ ಸಂಗ್ರಹಕ್ಕೆ ಸಹಕಾರ ನೀಡುವುದಾಗಿ ಹೇಳಿದರು.
















ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಮಾಜಿ ಸಚಿವ ಎಸ್. ಅಂಗಾರ, ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಹಾಸ ಮಣಿಯಾಣಿ ಪಡ್ಪು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ನಾಯಕ್ ಪೊಸವಳಿಗೆ, ಪ್ರಧಾನ ಕಾರ್ಯದರ್ಶಿ ಆರ್.ಕೆ. ಭಟ್ ಕುರುಂಬುಡೇಲು, ಆಡಳಿತ ಮಂಡಳಿ ಕಾರ್ಯದರ್ಶಿ ಕುಶಾಲಪ್ಪ ಗೌಡ ಮಣಿಮಜಲು, ಕೋಶಾಧಿಕಾರಿ ಆನಂದ ಪಡ್ಪು, ಮಾತೃಮಂಡಳಿ ಅಧ್ಯಕ್ಷೆ ಶ್ರೀಮತಿ ಸುಮಾ ವಿ. ಆಚಾರ್ ಪದಾಧಿಕಾರಿಗಳಾದ ಜಗದೀಶ್ ರೈ ತಂಬಿನಮಕ್ಕಿ, ಚಂದ್ರಶೇಖರ ಪನ್ನೆ, ಕ್ಯಾ. ಸುಧಾನಂದ ಮಣಿಯಾಣಿ ತೀರ್ಥರಾಮ ಮಣಿಮಜಲು, ಮನು ತೊಂಡಚ್ಚನ್, ರಮೇಶ್ ನಾಯಕ್ ಪನ್ನೆ, ನಾಗೇಶ್ ಕುಲಾಲ್ ಹಾಗೂ ಎರಡೂ ಸಮಿತಿಗಳ ಸದಸ್ಯರು, ಉದ್ಯಮಿ ದೇವಿಪ್ರಸಾದ್ ಶೆಟ್ಟಿ ಬೆಳ್ಳಾರೆ ಸೇರಿದಂತೆ ಭಕ್ತಾಧಿಗಳು ಈ ಸಂದರ್ಭಗಳಲ್ಲಿ ಉಪಸ್ಥಿತರಿದ್ದರು.
ಸಂಸದರು ಮತ್ತು ಶಾಸಕಿ ಭಾಗೀರಥಿ ಮುರುಳ್ಯರನ್ನು ದೇವಾಲಯದ ವತಿಯಿಂದ ಶಾಲು ಹೊದಿಸಿ, ಪ್ರಸಾದ ನೀಡಿ ಗೌರವಿಸಲಾಯಿತು.










