ಆಲೆಟ್ಟಿಯ
ಜನನಿ ಫ್ರೆಂಡ್ಸ್ ಕ್ಲಬ್ ಗುಂಡ್ಯ ಇದರ ಕಾರ್ಯಾಲಯಕ್ಕೆ ಜು.15 ರಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ರವರು ಭೇಟಿ ನೀಡಿ ಕರಪತ್ರ ಬಿಡುಗಡೆಗೊಳಿಸಿದರು.
















ಅಲೆಟ್ಟಿಯಲ್ಲಿ ನಡೆದ ಬಿಜೆಪಿ ಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಗೆ ಆಗಮಿಸಿದ ಸಂಸದರು ಕ್ಲಬ್ ಕಾರ್ಯಾಲಯಕ್ಕೆ ಭೇಟಿ ನೀಡಿದರು. ಆಲೆಟ್ಟಿ ಮೊಸರು ಕುಡಿಕೆ ಉತ್ಸವ ಸಮಿತಿಯ ಅಧ್ಯಕ್ಷ ನಿವೃತ್ತ ಯೋಧ ರಾಧಾಕೃಷ್ಣ ರೈ ಆಲೆಟ್ಟಿ ಯವರು ಶಾಲು ಹಾರ ಹಾಕಿ ಸಂಸದರನ್ನು ಸ್ವಾಗತಿಸಿದರು.
ಬಳಿಕ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರವನ್ನು ಬಿಡುಗಡೆ ಗೊಳಿಸಿ ಸಂಸದರು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಾಸಕಿ ಕು. ಭಾಗೀರಥಿ ಮುರುಳ್ಯ, ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ವಳಲಂಬೆ, ನ.ಪಂ.ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಸದಸ್ಯೆ ಶಿಲ್ಪಾ ಸುದೇವ್,ಹರೀಶ್ ಕಂಜಿಪಿಲಿ, ಯತಿಶ್ ಆರ್ವಾರ, ರವೀಂದ್ರ ಶೆಟ್ಟಿ,
ಪ್ರದೀಪ್ ಕುಮಾರ್ ರೈ, ಶ್ರೀಪತಿ ಭಟ್ ಮಜಿಗುಂಡಿ,
ಜನನಿ ಕ್ಲಬ್ ಅಧ್ಯಕ್ಷ ಸತೀಶ್ ಕುಲಾಲ್ ಆಲೆಟ್ಟಿ, ಗೌರವಾಧ್ಯಕ್ಷ ಸುನಿಲ್ ಹಾಗೂ
ಸಂಘದ ಪದಾಧಿಕಾರಿಗಳು
ಮತ್ತು ಸದಸ್ಯರು ಉಪಸ್ಥಿತರಿದ್ದರು.
ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಸ್ವಾಗತಿಸಿ, ಕ್ಲಬ್ ಗೌರವಾಧ್ಯಕ್ಷ ಲತೀಶ್ ಗುಂಡ್ಯ ವಂದಿಸಿದರು.










