ಅಯ್ಯನಕಟ್ಟೆ ಶಾಲಾ ಮಕ್ಕಳಿಗೆ ಭತ್ತ ನಾಟಿ ಪ್ರಾತ್ಯಕ್ಷಿಕೆ

0

.ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಅಯ್ಯನಕಟ್ಟೆ ಇಲ್ಲಿನ ಇಕೋ ಕ್ಲಬ್ ಹಾಗೂ ಎಸ್ ಡಿ.ಎಂ‌ ಸಿ ವತಿಯಿಂದ ಭತ್ತ ನಾಟಿ ಮಾಡುವ ವಿಧಾನವನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಕಾರ್ಯಕ್ರಮ ಜು.15 ರಂದು ನಡೆಸಲಾಯಿತು.

ಕಳಂಜ ಗ್ರಾಮದ ಮಣಿಮಜಲಿನ ಎಲ್ಯಣ್ಣಪೂಜಾರಿಯವರ ಗದ್ದೆಯಲ್ಲಿ ಪ್ರಾತ್ಯಕ್ಷಿಕೆಯನ್ನು ಮಾಡಲಾಯಿತು. ಮಕ್ಕಳು ಭತ್ತದ ಗಿಡ ನಾಟಿ ಮಾಡಿ ಖುಷಿಪಟ್ಟರು.
ಈ ಕಾರ್ಯದಲ್ಲಿ ಶಾಲಾ
ಎಸ್. ಡಿ ಎಮ್ .ಸಿ ಅಧ್ಯಕ್ಷರಾದ ಭಾಸ್ಕರ ಕೆ ಹಾಗೂ ಸದಸ್ಯರು ಪೋಷಕರು , ಶಿಕ್ಷಕರಾದ ವಿದ್ಯಾ, ಸುರೇಖ, ದಿವ್ಯ, ಸೌಮ್ಯ ಮತ್ತಿತರು ಭಾಗವಹಿಸಿದ್ದರು.