ಅಜ್ಜಾವರ ಗ್ರಾಮದ ಅಟ್ಲೂರು ನಿವಾಸಿ, ನಿವೃತ್ತ ಶಿಕ್ಷಕ ಅಚ್ಚುತ ಅಟ್ಲೂರುರವರ ಪತ್ನಿ ಶ್ರೀಮತಿ ಜಯಂತಿಯವರು ತಮ್ಮ 52 ನೇ ವಯಸ್ಸಿನಲ್ಲಿ ಪಿಯುಸಿ ಪರೀಕ್ಷೆ ತೇರ್ಗಡೆಯಾಗಿದ್ದಾರೆ.
ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ಅವರು ಕಲಾ ವಿಭಾಗದಲ್ಲಿ 307 ಅಂಕ ಗಳಿಸಿದ್ದಾರೆ. (ಕನ್ನಡ 57, ಇಂಗ್ಲೀಷ್ 50, ಇತಿಹಾಸ 55, ಅರ್ಥಶಾಸ್ತ್ರ 51, ರಾಜ್ಯ ಶಾಸ್ತ್ರ 50, ಸಮಾಜಶಾಸ್ತ್ರ 49).















ಜಯಂತಿಯವರು ಅಜ್ಜಾವರ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾಗಿ ಸೇವೆ ಮಾಡಿದ್ದಾರೆ. ಮುಳ್ಯ – ಅಟ್ಲೂರು ಶ್ರೀ ಗೌರಿ ವರ ಮಹಾಲಕ್ಷ್ಮಿ ಪೂಜಾ ಸಮಿತಿಯ ಸ್ಥಾಪಕಾಧ್ಯಕ್ಷರಾಗಿ, ಪ್ರಸ್ತುತ ಗೌರವಾಧ್ಯಕ್ಷ ರಾಗಿದ್ದಾರೆ.
ಇವರು ಸುಳ್ಯದ ಶಾರದಾ ವಿದ್ಯಾಲಯ ಹಾಗೂ ಪುತ್ತೂರಿನ ಪ್ರಗತಿ ವಿದ್ಯಾಸಂಸ್ಥೆಯವರಿಂದ ಮಾರ್ಗದರ್ಶನ ಪಡೆದಿದ್ದರು.
ಕಲಿಕೆಗೆ ವಯಸ್ಸಿನ ಅಡ್ಡಿ ಇಲ್ಲ. ಮನಸ್ಸಿದ್ದರೆ ಏನೂ ಸಾಧಿಸಬಹುದು ಎಂಬುದಕ್ಕೆ ಇದೊಂದು ಉದಾಹರಣೆ.










