














ಕುಕ್ಕೆ ಸುಬ್ರಹ್ಮಣ್ಯದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸುಬ್ರಹ್ಮಣ್ಯ ಇದರ ೫೫ನೇ ವರ್ಷದ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಕಲಾವಿದ ಕೆ.ಯಜ್ಞೇಶ್ ಆಚಾರ್ ಆಯ್ಕೆಗೊಂಡಿದ್ದಾರೆ.
೫೪ನೇ ವರ್ಷದ ಅಧ್ಯಕ್ಷ ದಿನೇಶ್ ಮೊಗ್ರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಉಪಾಧ್ಯಕ್ಷರಾಗಿ ದಿನೇಶ್ ಸಂಪ್ಯಾಡಿ, ಚಿದಾನಂದ ಕಂದಡ್ಕ, ಅಚ್ಚುತ್ತ ಗೌಡ, ಗಿರೀಶ್ ಆಚಾರ್ಯ ಪೈಲಾಜೆ, ಯಶೋಧಕೃಷ್ಣ ನೂಚಿಲ, ಸುಕೇಶ್ ಬೇಕಲ್ ನೇಮಕಗೊಂಡರು. ಎ.ವೆಂಕಟ್ರಾಜ್, ರಾಜೇಶ್ ಎನ್.ಎಸ್ ಸಮಿತಿಯ ಸಂಚಾಲಕರಾಗಿ ಮುಂದುವರೆದರು. ಪ್ರಧಾನ ಕಾರ್ಯದರ್ಶಿ ರತ್ನಾಕರ ಸುಬ್ರಹ್ಮಣ್ಯ, ಕಾರ್ಯದರ್ಶಿ ದೀಪಕ್ ನಂಬಿಯಾರ್, ಪ್ರಧಾನ ಕೋಶಾಧಿಕಾರಿ ಶ್ರೀಕೃಷ್ಣ ಶರ್ಮ ಕೋಶಾಧಿಕಾರಿ ದೀಪಕ್ ಎಚ್.ಬಿ ಆಯ್ಕೆಯಾದರು. ಜತೆಕಾರ್ಯದರ್ಶಿಗಳಾಗಿ ಪ್ರಕಾಶ್ ಸುಬ್ರಹ್ಮಣ್ಯ, ಶೇಖರ್ ಕುಕ್ಕೆ, ಶ್ರೀಕುಮಾರ್ ಬಿಲದ್ವಾರ, ಸುಹಾಸ್ ಎಸ್.ಎಸ್, ಸಹಕೋಶಾಧಿಕಾರಿಗಳಾಗಿ ನಿತಿನ್ ಭಟ್, ಪ್ರಶಾಂತ್ ಆಚಾರ್ಯ ನೇಮಕಗೊಂಡರು.
ಉಳಿದಂತೆ ಸಾಂಸ್ಕೃತಿಕ ಸಮಿತಿ ಸಂಚಾಲಕರಾಗಿ ಲೋಕೇಶ್ ಬಿ.ಎನ್, ಲೋಕೇಶ್ ಎನ್.ಎಸ್, ಕ್ರೀಡಾ ಸಮಿತಿಗೆ ಉಮೇಶ್ ಕೆ.ಎನ್, ಸಾಂಸ್ಕೃತಿಕ ಸ್ಪರ್ಧಾ ಸಮಿತಿಗೆ ರವೀಂದ್ರ.ಕೆ.ಸುಬ್ರಹ್ಮಣ್ಯ, ಶೋಭಾಯಾತ್ರೆ ಸಮಿತಿಗೆ ವೆಂಕಟೇಶ್ ಎಚ್.ಎಲ್, ರವಿ ಕಕ್ಕೆಪದವು, ವೈದಿಕ ಸಮಿತಿಗೆ ನಿರಂಜನ ಭಟ್, ಅದೃಷ್ಟಚೀಟಿ ಸಮಿತಿಗೆ ಪಪ್ಪು ಲೋಕೇಶ್, ಆಹಾರ ಸಮಿತಿಗೆ ಪ್ರಶಾಂತ್ ಆಚಾರ್ಯ, ಸುಕೇಶ್ ಬೇಕಲ್, ನಿತಿನ್ ಭಟ್, ಅಲಂಕಾರ ಸಮಿತಿಗೆ ಹರೀಶ್ ಅಗರಿಕಜೆ, ಯಶೋಧಕೃಷ್ಣ ನೂಚಿಲ,ಸುಬ್ರಹ್ಮಣ್ಯ ಮಾನಾಡು, ಹರ್ಷಿತ್ ನೂಚಿಲ ಅವರನ್ನು ಸಂಚಾಲಕರಾಗಿ ಆಯ್ಕೆ ಮಾಡಲಾಯಿತು. ಅಲ್ಲದೆ ಸಮಿತಿ ಸದಸ್ಯರನ್ನು ಹಾಗೂ ಉಪಸಮಿತಿ ಸದಸ್ಯರನ್ನು ಸಭೆಯಲ್ಲಿ ನೇಮಿಸಲಾಯಿತು.










