ಬಾಳಿಲ: ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ಪರಿಸರ ಜಾಗೃತಿ ಯಾನ

0

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಸುಳ್ಯ ತಾಲೂಕು ಘಟಕ ಇವರ ಸಂಯೋಜನೆಯಲ್ಲಿ ರಾಮನ್ ಇಕೋ ಕ್ಲಬ್ ಮತ್ತು ಸುವಿಚಾರ ಸಾಹಿತ್ಯ ಸಂಘ ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲ ಇವರ ಸಹಕಾರದೊಂದಿಗೆ ಪರಿಸರ ಜಾಗೃತಿ ಯಾನ – ಪರಿಸರ ಗೀತ ಗಾಯನ, ಔಷಧಿ ಸಸ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸ್ಪರ್ಧೆಗಳು ಜುಮ 18ರಂದು ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ನಡೆಯಿತು.


ಸುಳ್ಯ ನೆಹರು ಮೆಮೋರಿಯಲ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ದೇವಿಪ್ರಸಾದ್ ಕೆ.ಯನ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಪರಿಸರದಲ್ಲಿರುವ ಪಕ್ಷಿಗಳ ವೈವಿಧ್ಯತೆಯ ಬಗ್ಗೆ ಮತ್ತು ಪರಿಸರದ ಜೀವ ವೈವಿಧ್ಯತೆ, ನಮ್ಮ ಸುತ್ತಲಿನ ಔಷಧ ಸಸ್ಯಗಳ ಬಗ್ಗೆ ಮಾಹಿತಿ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯತಾಲೂಕು ಘಟಕದ ಗೌರವ ಕಾರ್ಯದರ್ಶಿ ತೇಜಸ್ವಿ ಕಡಪಳ ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ವಿದ್ಯಾಬೋಧಿನೀ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಉದಯಕುಮಾರ್ ರೈ ಕೃತಜ್ಞತಾ ಮಾತುಗಳೊಂದಿಗೆ ಕಾರ್ಯಕ್ರಮಕ್ಕೆ ಶುಭವನ್ನು ಕೋರಿದರು. ಜಿಲ್ಲಾ ಸಾಹಿತ್ಯ ಪರಿಷತ್ ಪ್ರತಿನಿಧಿ ರಾಮಚಂದ್ರ ಪಲ್ಲತಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಪೇರಾಲು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಪರಿಸರ ಪ್ರೇಮವನ್ನು ಬೆಳೆಸುವುದಕ್ಕೆ ವಿದ್ಯಾರ್ಥಿಗಳಿಗೆ ಪ್ರೇರಣಾ ಮಾತುಗಳನ್ನಾಡಿದರು. ರಮೇಶ್ ಮೆಟ್ಟಿನಡ್ಕ ಪರಿಸರ ಗೀತೆಯನ್ನು ಹಾಡಿದರು. ಪ್ರೌಢಶಾಲೆಯ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ಸಹ ಶಿಕ್ಷಕ ಸುವಿಚಾರ ಸಾಹಿತ್ಯ ಸಂಘದ ಸಂಯೋಜಕ ಲೋಕೇಶ್ ಬಿ ನಿರ್ವಹಿಸಿದರು. ರಾಮನ್ ಈಕೋ ಕ್ಲಬ್ ನ ಸಂಯೋಜಕ ಮೋಹನ್ ಕೆ.ಸಿ ವಂದಿಸಿದರು. ಔಷಧ ಸಸ್ಯಗಳ ಬಗ್ಗೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕುಮಾರಿ ಗುರುಪ್ರಿಯ ಪ್ರಥಮ ಸ್ಥಾನ, ಕು. ನಿಶಾ ದ್ವಿತೀಯ ಸ್ಥಾನ ಹಾಗೂ ಕು. ಸಿಂಚನ ಕೆ.ಸಿ ತೃತೀಯ ಸ್ಥಾನ ಗಳಿಸಿದರು. ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಆಡಳಿತ ಮಂಡಳಿ, ವಿದ್ಯಾರ್ಥಿಗಳು ಶಿಕ್ಷಕ- ಸಿಬ್ಬಂದಿ ವರ್ಗ ಹಾಗೂ ಪೋಷಕ ವೃಂದ ಸಹಕರಿಸಿದರು.