ಔಷಧಿ ರಹಿತ ಚಿಕಿತ್ಸೆಯಿಂದ ಇಲ್ಲಿದೆ ಹಲವು ಖಾಯಿಲೆಗೆ ಪರಿಹಾರ
ಆಲೆಟ್ಟಿ ಗ್ರಾಮ ಪಂಚಾಯತ್ ಮತ್ತು ಕಂಪಾನಿಯೋ ನೆಮ್ಮದಿ ವೆಲ್ ನೆಸ್ ಸೆಂಟರ್ ಪುತ್ತೂರು ಇದರ ಆಶ್ರಯದಲ್ಲಿ ಉಚಿತ ಫೂಟ್ ಫಲ್ಸ್ ಥೆರಪಿ ಶಿಬಿರವು ಜು.23 ರಿಂದ ಆ.8 ರ ತನಕ ನಡೆಯಲಿರುವುದು.















ಶಿಬಿರದಉದ್ಘಾಟನೆಯನ್ನು ಆಲೆಟ್ಟಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವೀಣಾ ವಸಂತ ಆಲೆಟ್ಟಿ ಯವರು ನೆರವೇರಿಸಲಿದ್ದಾರೆ.
ಪುತ್ತೂರು ನೆಮ್ಮದಿ ವೆಲ್ ನೆಸ್ ಸೆಂಟರ್ ಇದರ ಮಾಲಕರಾದ ಕೆ.ಪ್ರಭಾಕರ ಸಾಲ್ಯಾನ್ ಬಾಕಿಲಗುತ್ತು ಇವರು ಫೂಟ್ ಫಲ್ಸ್ ಥೆರಪಿಯ ಕುರಿತು ಮಾಹಿತಿ ನೀಡಲಿರುವರು.
ಅತಿಥಿಗಳಾಗಿ ಪಂ.ಉಪಾಧ್ಯಕ್ಷೆ ಶ್ರೀಮತಿ ಕಮಲ ನಾಗಪಟ್ಟಣ, ಪಿ.ಡಿ.ಒ ಸೃಜನ್ ಎ.ಜಿ, ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ಆಲೆಟ್ಟಿ ಸದಾಶಿವ ದೇವಸ್ಥಾನದ ವ್ಯ.ಸ.ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ, ನಿವೃತ್ತ ಯೋಧ ರಾಧಾಕೃಷ್ಣ ರೈ ಆಲೆಟ್ಟಿ,
ಜನನಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಸತೀಶ್ ಕುಲಾಲ್ ಆಲೆಟ್ಟಿಉಪಸ್ಥಿತರಿರುವರು. ಶಿಬಿರದಲ್ಲಿ ರಕ್ತ ಪರಿಚಲನೆ ಮತ್ತು ನರಗಳ ಸಮಸ್ಯೆಗಳನ್ನು ಔಷಧಿ ರಹಿತವಾಗಿ ಅಡ್ಡ ಪರಿಣಾಮವಿಲ್ಲದ 30 ನಿಮಿಷದ ಥೆರಪಿ ಯಿಂದ ನಿವಾರಿಸಬಲ್ಲುದು. ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ದೇಶದಾದ್ಯಂತ 350 ಶಾಖೆಗಳನ್ನು ಹೊಂದಿದ್ದು 10 ಲಕ್ಷಕ್ಕಿಂತ ಹೆಚ್ಚು ಜನರು ಇದರಿಂದ ಪರಿಹಾರಕಂಡುಕೊಂಡಿದ್ದಾರೆ. ಮಧು ಮೇಹ, ಸಂಧಿ ವಾತ , ಸ್ನಾಯು ಸೆಳೆತ, ಪಾರ್ಕಿನ್ ಸನ್, ಸರ್ವಿಕಲ್ ಸ್ಪಾಂಡಿಲೈಟಿಸ್, ಥೈರಾಯಿಡ್, ಬೆನ್ನು ನೋವು, ಅಧಿಕ ರಕ್ತದೊತ್ತಡ, ವೆರಿಕೋಸ್ ವೇನ್, ಊತ, ಸಯಾಟಿಕಾ,ನಿದ್ರಾಹೀನತೆ,ಪಾರ್ಶ್ವ ವಾಯು, ಬೊಜ್ಜು ನಿವಾರಣೆ ಇನ್ನಿತರ ಕಾಯಲೆಗಳಿಗೆ ಫೂಟ್ ಫಲ್ಸ್ ಥೆರಪಿಯಿಂದ ಪರಿಹಾರ ಕಂಡುಕೊಳ್ಳಬಹುದೆಂದು ಸಂಘಟಕರು ತಿಳಿಸಿರುತ್ತಾರೆ.










