ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತು ಆಶ್ರಯದಲ್ಲಿ
ಶೌರ್ಯ ಮಕ್ಕಳ ಕುಣಿತ ಭಜನಾ ತಂಡ ಬಾಳಿಲ- ಮುಪ್ಪೇರಿಯ
ಇದರ ತರಬೇತಿ ಕಾರ್ಯಕ್ರಮ ಜು. 19ರಂದು ಶ್ರೀ ಧರ್ಮಶಾಸ್ತಾ ಭಜನಾ ಮಂದಿರ ಬಾಳಿಲ – ಮುಪ್ಪೇರ್ಯದಲ್ಲಿ
ಉದ್ಘಾಟನೆಗೊಂಡಿತು.
ಇಲ್ಲಿ ಉದ್ಘಾಟನೆ ಗೊಂಡಿತು.

ಪುರೋಹಿತ್ ಸಚಿನ್ ಶರ್ಮಾ ಅಲೆಕ್ಕಾಡಿ ದೀಪ ಪ್ರಜ್ವಲನೆ ಮಾಡಿ ಭಜನೆಯಿಂದ ನೆಮ್ಮದಿ ಲಭಿಸುವುದರ ಜೊತೆಗೆ ಆರೋಗ್ಯವು ಲಭಿಸುವುದು ಎಲ್ಲರೂ ಮನೆಗಳಲ್ಲಿ ನಿತ್ಯ ಭಜನೆಯನ್ನು ಮಾಡಬೇಕು ದೇವರನ್ನು ಒಲಿಸುವ ಶಕ್ತಿ ಭಜನೆಯಲ್ಲಿದೆ ಎಂದರು.















ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಧರ್ಮಶಾಸ್ತಾ ಭಜನಾ ಮಂದಿರ ಮುಪ್ಪೇರಿಯ ಬಾಳಿಲ ಇದರ ಅಧ್ಯಕ್ಷ ದಾಮೋದರ ಕಲ್ಕಲ ಮಾತನಾಡಿ ಭಜನೆಯಿಂದ ನಮ್ಮನ್ನು ನಾವು ಕಂಡುಕೊಳ್ಳಬಹುದು. ಪ್ರತಿ ಮನೆ ಮನೆಗಳಲ್ಲಿ ಭಜನೆ ನಡೆಯಬೇಕು ಇದರಿಂದ ಸಂಸ್ಕಾರದ ಪಾಠ ದೊರೆಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಿದ್ದ ಶ್ರೀಕೃಷ್ಣ ಸೇವಾ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಗೌಡ ಬಾಳಿಲ ಹಾಗೂ ಸ್ನೇಹಾಂಜಲಿ ಮಕ್ಕಳ ಕುಣಿತ ಭಜನಾ ತಂಡ ಬೆಳ್ಳಾರೆ ಇದರ ಸಂಯೋಜಕರಾದ ಮಹಾಲಿಂಗ ಪಾಟಾಳಿ ಬೆಳ್ಳಾರೆ
ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಭಜನಾ ಕಲಿಕಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.
ಭಜನಾ ಕಲಿಕಾರ್ಥಿಗಳು ಪ್ರಾರ್ಥನೆ ಗೈದು ಭಜನಾ ತರಬೇತುದಾರರಾದ ಸದಾನಂದ ಆಚಾರ್ಯ ಕಾಣಿಯೂರು ಪ್ರಾಸ್ತವಿಕದೊಂದಿಗೆ ಸ್ವಾಗತಿಸಿ, ವಂದಿಸಿದರು.
ರಂಗ ನಿರ್ದೇಶಕ ರಾಕೇಶ್ ಆಚಾರ್ಯ ಬನಾರಿ ಕಾರ್ಯಕ್ರಮ ನಿರೂಪಿಸಿದರು.










