ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತಾಧಿಯೊಬ್ಬರ 10 ಗ್ರಾ.ಪಂ ಚಿನ್ನದ ಸರ ಕಳೆದು ಹೋಗಿದ್ದು ಅದು ದೇವಾಲಯದ ಭದ್ರತಾ ಸಿಬ್ಬಂದಿ ದಾಮೋದರ ಅವರಿಗೆ ಸಿಕ್ಜಿದ್ದು ಅದನ್ನವರು ಪ್ರಮಾಣಿಕವಾಗಿ ಅದರ ಮಾಲಿಕರಿಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯುಲ್ಲಿ ಹಸ್ತಾಂತರಿಸಿದರು.















ದೇವಸ್ಥಾನದ ಸೆಕ್ಯೂರಿಟಿ ಉಸ್ತುವಾರಿಯಾದ ದಾಮೋಧರ ಅವರ ಕೈಗೆ ಸಿಕ್ಕಿದ್ದ ಚಿನ್ನವನ್ನು ಅದರ ವಾರಸುದಾರ ಉಜಿರೆಯ ಸಚಿನ ಎಂಬವರಿಗೆ ಹಸ್ತಾಂತರಿಸಲಾಯಿತು. ಠಾಣಾ ಎಸ್ ಐ ಕಾರ್ತಿಕ್ ಉಪಸ್ಥಿತರಿದ್ದರು.










