














ಬೆಳ್ಳಾರೆಯ ರಾಜೀವಗಾಂಧಿ ಸೇವಾ ಕೇಂದ್ರದಲ್ಲಿ ಪುತ್ತೂರು ಅಂಚೆ ವಿಭಾಗ ಮತ್ತು ಸುಳ್ಯ ಅಂಚೆ ಉಪವಿಭಾಗ ವತಿಯಿಂದ ನಡೆದ ವಿಭಾಗೀಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೆಳ್ಳಾರೆ ಅಂಚೆ ಕಛೇರಿಯ ಸಿಬ್ಬಂದಿ ಅನಂತಕೃಷ್ಣ ಪ್ರಭು ಅವರಿಗೆ ವಿಭಾಗೀಯ ಮಟ್ಟದ ಅತ್ಯುತ್ತಮ ಡಾಕ್ ಸೇವಕ್ ಸೇರಿದಂತೆ ಪಿಎಲ್ಐ ಮತ್ತು ಆರ್ ಪಿ ಎಲ್ ಐ ನಲ್ಲಿ ದ್ವಿತೀಯ ಸ್ಥಾನ, ಲಾಗಿನ್ ಡೇ ಅತ್ಯುತ್ತಮ ಪ್ರದರ್ಶನ ಪ್ರಶಸ್ತಿಗಳು ಲಭಿಸಿದೆ. ಪುತ್ತೂರು ಅಂಚೆ ಅಧೀಕ್ಷಕ ರವೀಂದ್ರ ನಾಯ್ಕ್ ಪ್ರಶಸ್ತಿ ನೀಡಿ ಗೌರವಿಸಿದರು. ಸಹಾಯಕ ಅಂಚೆ ಅಧೀಕ್ಷಕ ಚಂದ್ರ ನಾಯ್ಕ್, ಸುಳ್ಯ ಉಪ ಅಂಚೆ ವಿಭಾಗದ ಅಂಚೆ ನಿರೀಕ್ಷಕ ವಿನೋದ್ ಕುಮಾರ್ ಎಂ ಎಸ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.










