ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಸಭೆ

0

ನೂತನ ಬ್ಲಾಕ್ ಸಮಿತಿ ರಚನೆ ಬಗ್ಗೆ ಸಮಾಲೋಚನೆ

ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ರಚಿಸುವ ಬಗ್ಗೆ ಸಮಾಲೋಚನಾ ಸಭೆ ಇಂದು ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ ಯವರ ಅಧ್ಯಕ್ಷತೆಯಲ್ಲಿ ಸುಳ್ಯದ ಕಾನತ್ತಿಲ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆಯಿತು.

ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ ಯವರು ಮಾತನಾಡಿ ನೂತನ ಸಮಿತಿ ರಚನೆ ಬಗ್ಗೆ ಕೆಪಿಸಿಸಿ ನಿಯಮಾವಳಿ ಪ್ರಕಾರ ಎಲ್ಲಾ ಸಮುದಾಯ ಮತ್ತು ಪ್ರಾದೇಶಿಕವಾರು ಸಂಘಟನಾತ್ಮಕ ವಾಗಿ ತೊಡಗಿಸಿಕೊಳ್ಳುವವರನ್ನು ಜೊತೆ ಸೇರಿಸಿಕೊಂಡು ನೂತನ ಸಮಿತಿ ರಚನೆ ಮಾಡಲಾಗುವುದು. ಪಕ್ಷ ಸದೃಢ ಗೊಳ್ಳಲು ಯುವಜನತೆಯನ್ನು ಹೆಚ್ಚು ಹೆಚ್ಚು ಪಕ್ಷಕ್ಕೆ ಆಕರ್ಷಿಸಬೇಕು. ಆ ಮೂಲಕ ಸುಳ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಬೇಕಿದೆ ಎಂದು ಹೇಳಿದರು.

ಸಭೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಟಿ.ಎಂ ಶಹೀದ್ ತೆಕ್ಕಿಲ್, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ ಸಿ ಜಯರಾಮ, ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಪಿ ಎಸ್ ಗಂಗಾಧರ, ಸುಳ್ಯ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಶಾಹುಲ್ ಹಮೀದ್ ಕುತ್ತಮೊಟ್ಟೆ, ಸುಳ್ಯ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶಶಿಧರ ಎಂ ಜೆ, ಸುಳ್ಯ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ಭವಾನಿಶಂಕರ್ ಕಲ್ಮಡ್ಕ, ಸುಳ್ಯ ಬ್ಲಾಕ್ ಕಾಂಗ್ರೆಸ್ ಎಸ್ . ಸಿ ಘಟಕದ ಅಧ್ಯಕ್ಷರಾದ ಮಹೇಶ್ ಬೆಳ್ಳಾರ್ಕರ್, ಸುಳ್ಯ ಬ್ಲಾಕ್ ಎಸ್ ಟಿ ಘಟಕದ ಅಧ್ಯಕ್ಷರಾದ ಪರಮೇಶ್ವರ ಕೆಂಬಾರೆ, ಭಾಗವಹಿಸಿ ಯುವ ಕಾಂಗ್ರೆಸ್ ಗೆ ಸಂಪೂರ್ಣ ಸಹಕಾರ ಮತ್ತು ಮಾರ್ಗದರ್ಶನ ಘೋಷಿಸಿದರು.


ವೇದಿಕೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾದ ಫೈಜಲ್ ಕಡಬ, ಸುಳ್ಯ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ರಂಜಿತ್ ರೈ ಮೇನಾಲ, ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಆಶಿಕ್ ಅರಂತೋಡು, ಸುಳ್ಯ ಬ್ಲಾಕ್ ಎನ್ ಎಸ್ ಯು ಐ ಅಧ್ಯಕ್ಷರಾದ ಧನುಷ್ ಕುಕ್ಕೇಟಿ ಮತ್ತು ಸಂಪಾಜೆ ವಲಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ನಿತಿನ್ ಗೂನಡ್ಕ ಉಪಸ್ಥಿತರಿದ್ದರು.

ಯುವ ಕಾಂಗ್ರೆಸ್ ನ ನೂತನ ಸಮಿತಿಯ ಪ್ರಮುಖರಾದ ಶೌಕತ್ ಅಲಿ ಅಡ್ಪಂಗಾಯ, ರಕ್ಷಿತ್ ಗೂನಡ್ಕ, ಮನೋಜ್ ತೊಡಿಕಾನ, ಪ್ರೇಮಾ ಹರೀಶ್ವರನ್ (ಗಾಂಧಿ) ಅಡ್ಯಡ್ಕ, ಪ್ರತಿಭಾ ಕಾಯರ, ಪ್ರಕಾಶ್ ಪಿ ಎಸ್ ಅರಂತೋಡು, ಶರವಣ ಕುಮಾರ್ ಮೇದಿನಡ್ಕ, ಮೊಹಮ್ಮದ್ ಶರೀಫ್ ಬೆಳ್ಳಾರೆ, ಯಕ್ಷಿತ್ ಮಡ್ತಿಲ, ರಂಜಿತ್ ಪೈಕ, ಹರೀಶ್ ಮೆಟ್ಟಿನಡ್ಕ, ಇಬ್ರಾಹಿಂ (ಇಬ್ಬು) ಜಯನಗರ, ಪ್ರಕಾಶ್ ಮೇನಾಲ, ಮಧುಸೂದನ ಬೂಡು, ಇಕ್ಫಾಲ್ ಸುಣ್ಣ ಮೂಲೆ ಅಬ್ದುಲ್ ಶಹೀದ್, ನಿಸಾರ್ ಪೈಂಬೆಚ್ಚಾಲು ಮತ್ತು ಸುಳ್ಯ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರಾದ ವಿಜೇಶ್ ಹಿರಿಯಡ್ಕ, ಸುಳ್ಯ ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯರಾದ ಕರುಣಾಕರ ಮಡ್ತಿಲ, ಕೊಯ್ಕುಳಿ ಬೂತ್ ಅಧ್ಯಕ್ಷರಾದ ಭಾಗೀಶ್ ಕೆ ಟಿ, ಕೇಶವ ಮೊರಂಗಲ್ಲು, ಸುಧೀರ್ ಅಮೆ ಭಾಗವಹಿಸಿದರು.

ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ಮತ್ತು ಸುಳ್ಯ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿಗಳ ಪದಾಧಿಕಾರಿಗಳ ಪಟ್ಟಿ ತಯಾರಿಸಲಾಯಿತು.

ಅಗತ್ಯ ವಸ್ತುಗಳ ಬೆಲೆ ಏರಿಕೆ, ರಸಗೊಬ್ಬರಗಳ ಬೆಲೆ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ, ಸುಳ್ಯ ನಗರ ಪಂಚಾಯತ್ ಅವ್ಯವಸ್ಥಿತ ಆಡಳಿತ, ನಗರ ಪಂಚಾಯತ್ ಕಸ ವಿಲೇವಾರಿ ಘಟಕದ ದುರವಸ್ಥೆ, ಆವರಣದಲ್ಲಿಯೇ ಕಸದ ರಾಶಿ ಶೇಖರಣೆ, ನಗರ ಪಂಚಾಯತ್ ರಸ್ತೆಗಳ ದುರಸ್ತಿಗೆ ಆಗ್ರಹಿಸಿ ಶೀಘ್ರದಲ್ಲೇ ಪ್ರತಿಭಟನೆ ನಡೆಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.