ಲಯನ್ಸ್ ಕ್ಲಬ್ ಬೆಳ್ಳಾರೆಗೆ 5 ವರ್ಷದೊಳಗಿನ ಬೆಸ್ಟ್ 10 ಕ್ಲಬ್‌ಗಳಲ್ಲಿ 4 ನೇ ಸ್ಥಾನದೊಂದಿಗೆ ಒಟ್ಟು 14 ಪ್ರಶಸ್ತಿಗಳು

0

ಜು. 20ರಂದು ಮಂಗಳೂರಿನ ವಾಮಂಜೂರಿನಲ್ಲಿ ನಡೆದ ಲಯನ್ಸ್ ಡಿಸ್ಟ್ರಿಕ್ಟ್‌ ಅವಾರ್ಡ್ಸ್ ನಲ್ಲಿ ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗಕ್ಕೆ 5 ವರ್ಷದೊಳಗಿನ ಬೆಸ್ಟ್ 10 ಕ್ಲಬ್ ಪ್ರಶಸ್ತಿಯಲ್ಲಿ 4ನೇ ಸ್ಥಾನ ಸೇರಿದಂತೆ ಒಟ್ಟು 17 ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.


2024-25ನೇ ಸಾಲಿನ ಅಧ್ಯಕ್ಷೆ ಲ. ಉಷಾ ಬಿ ಭಟ್ MJF, ಕಾರ್ಯದರ್ಶಿ ಲ. ಚೇತನ್ ಡಿ. ಶೆಟ್ಟಿ, ಕೋಶಾಧಿಕಾರಿ ಲ. ಈಶ್ವರ ವಾರಣಾಶಿ ಬೆಸ್ಟ್ ಅಧ್ಯಕ್ಷ, ಕಾರ್ಯದರ್ಶಿ, ಕೋಶಾಧಿಕಾರಿ ಅವಾರ್ಡ್ ಹಾಗೂ ಇತರ ಪ್ರಶಸ್ತಿಗಳನ್ನು ಪಡೆದುಕೊಂಡರು. ಉಳಿದಂತೆ ಲೈವ್ ದಿ ನೇಷನ್ ನಲ್ಲಿ ಪ್ರಥಮ ಸ್ಥಾನ, ಆರ್ಗನ್ ಡೊನೇಷನ್ ನಲ್ಲಿ ದ್ವಿತೀಯ ಸ್ಥಾನ, ಡಯಾಬಿಟಿಸ್ ಕೇರ್ ನಲ್ಲಿ ತೃತೀಯ ಸ್ಥಾನ, ಪರ್ಮನೆಂಟ್ ಪ್ರೊಜೆಕ್ಟ್, ಕನ್ಸೂಮರ್ ಎವಾರ್ನೆಸ್, ಪ್ರೊವೈಡ್ ಸಿವಿಕ್ ಅನಿಮೇಷನ್‌ ನಲ್ಲಿ ಚತುರ್ಥ ಸ್ಥಾನ, ಎಜುಕೇಶನ್ ಸಪೋರ್ಟ್, ಹ್ಯುಮ್ಯಾನಿಟೇರಿಯಂ ಎಫರ್ಟ್, ರೋಡ್ ಸೇಫ್ಟಿ, ಸ್ಕೂಲ್ ಸಪೋರ್ಟ್, ಸ್ಪೋರ್ಟ್ಸ್ ಪ್ರಮೋಷನ್ ಮತ್ತು ವಿಷನ್ ಕೇರ್ ನಲ್ಲಿ 5ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಲಯನ್ಸ್ ಜಿಲ್ಲಾ ಗವರ್ನರ್ ಲ. ಭಾರತಿ ಬಿ.ಎಂ ಪ್ರಶಸ್ತಿ ನೀಡಿದರು. ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗದ ಐಪಿಪಿ ಲ. ವಿಠಲ್ ಶೆಟ್ಟಿ ಪೆರುವಾಜೆ, 2025-26ನೇ ಸಾಲಿನ ಅಧ್ಯಕ್ಷ ಲ. ಯತೀಶ್ ಭಂಡಾರಿ, ಕಾರ್ಯದರ್ಶಿ ಲ. ಚೇತನ್ ಡಿ. ಶೆಟ್ಟಿ, ಕೋಶಾಧಿಕಾರಿ ಲ. ಎಂ.ಕೆ. ಶೆಟ್ಟಿ, ಪದಾಧಿಕಾರಿಗಳಾದ ಲ. ಭವಾನಿ ವಿ. ಶೆಟ್ಟಿ, ಲ. ಮನೋಹರ್, ಲ. ಯಶಸ್ವಿನಿ ಚೇತನ್ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.