ಭವಿತಾ ಬೇರಿಕೆ ರಾಷ್ಟ್ರೀಯ ಥೋಬಾಲ್ ಚಾಂಪಿಯನ್‌ಶಿಪ್‌ಗೆ ಆಯ್ಕೆ

0

ಕಳಂಜ ಗ್ರಾಮದ ಭವಿತಾ ಬೇರಿಕೆ ಥೋಬಾಲ್ ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


ಜುಲೈ 6ರಂದು ಮಂಡ್ಯದಲ್ಲಿ ನಡೆದ ರಾಷ್ಟ್ರೀಯ ಥ್ರೋಬಾಲ್ ಅರ್ಹತಾ ಪಂದ್ಯಾಕೂಟಗಳಲ್ಲಿ ಭಾಗವಹಿಸಿ ಆಯ್ಕೆಯಾಗಿ, ಆಗಸ್ಟ್ 16ರಿಂದ 18ರ ತನಕ ಜಾರ್ಖಂಡ್‌ನ ರಾಂಚಿಯಲ್ಲಿ ನಡೆಯಲಿರುವ 48ನೇ ಹಿರಿಯ ರಾಷ್ಟ್ರೀಯ ಥ್ರೋಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಸ್ಟೇಟ್ ಸೀನಿಯರ್ ನ್ಯಾಷನಲ್ ಚಾಂಪಿಯನ್ ಶಿಪ್ ತಂಡವನ್ನು ಪ್ರತಿನಿಧಿಸಲಿದ್ದಾರೆ.


ಇವರು ಕಳಂಜ ಗ್ರಾಮದ ಬೇರಿಕೆ ಲಕ್ಷ್ಮಣ ಗೌಡ ಹಾಗೂ ದಮಯಂತಿ ದಂಪತಿಯ ಪುತ್ರಿ.