ಐವರ್ನಾಡಿನ ಬೇಂಗಮಲೆ ಕ್ವಾಟ್ರಸ್ ನಲ್ಲಿ ಅಂತಿಮ ದರ್ಶನಕ್ಕೆ ಅವಕಾಶ















ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ, ತೋಟತೊಳಿಲಾಲರ ಸಂಘದ ಅಧ್ಯಕ್ಷ ಐವರ್ನಾಡಿನ ಚಂದ್ರಲಿಂಗಂರವರು ಜು.21 ರಂದು ಮೈಸೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದು ಅವರ ಮೃತದೇಹವನ್ನು ನಿನ್ನೆ ರಾತ್ರಿ ಗಂಟೆ 1.30 ಕ್ಕೆ ಐವರ್ನಾಡಿನ ಅವರ ಮನೆಗೆ ತರಲಾಯಿತು.
ಇಂದು ಸಾರ್ವಜನಿಕರಿಗೆ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಬಾಂಜಿಕೋಡಿಯ ಬೇಂಗಮಲೆ ಸಿ.ಆರ್.ಸಿ.ಕಾಲನಿಯ ಮನೆ ಸಮೀಪ ಸಂಜೆ ಗಂಟೆ 4.00 ರವರೆಗೆ ವ್ಯವಸ್ಥೆ ಮಾಡಲಾಗಿದ್ದು ಬಳಿಕ ಅವರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.










