
ದೇವಚಳ್ಳ ಗ್ರಾಮದ ಸೇವಾಜೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ಇತ್ತೀಚೆಗೆ ಪುನರ್ ರಚನೆ ಮಾಡಲಾಯಿತು.
ಅಧ್ಯಕ್ಷರಾಗಿ ಶ್ರೀಮತಿ ಪೂರ್ಣಿಮಾ ಮುಂಡೋಡಿ, ಉಪಾಧ್ಯಕ್ಷರಾಗಿ ಶ್ರೀ ಪ್ರವೀಣ್ ನರ್ಪ ಇವರು ಆಯ್ಕೆಯಾದರು.
ತೆರವಾದ ಸ್ಥಾನಕ್ಕೆ ಸದಸ್ಯರನ್ನು ನೇಮಕ ಮಾಡಲಾಯಿತು.















ಈ ಸಂದರ್ಭದಲ್ಲಿ 2024 -25ನೇ ಸಾಲಿನ 5ನೇ ತರಗತಿಯ ವಿದ್ಯಾರ್ಥಿಗಳು ಕೊಡುಗೆಯಾಗಿ ಶಾಲೆಗೆ ಚಯರ್ ಗಳನ್ನು ಹಸ್ತಾಂತರಿಸಿದರು.
ಶ್ರೀಮತಿ ಮತ್ತು ಶ್ರೀ ಹೊನ್ನಪ್ಪ ಗೌಡ ಹೊನ್ನೆಮೂಲೆ ಇವರು ಮಕ್ಕಳ ಪ್ರತಿಭಾ ಪುರಸ್ಕಾರ ಕ್ಕೆ ದತ್ತಿನಿಧಿಯಾಗಿ 10 ಸಾವಿರ ರೂಗಳನ್ನು ಶಾಲಾ ಮುಖ್ಯಶಿಕ್ಷಕರಾದ ಪ್ರಮೀಳಾ ರವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು, ಉಪಾಧ್ಯಕ್ಷರಾದ ಶ್ರೀಮತಿ ಲೀಲಾವತಿ, ನಿರ್ಗಮಿತ ಎಸ್ಡಿಎಂಸಿ ಅಧ್ಯಕ್ಷರಾದ ಶಾಂತಪ್ಪ ರೈ, ನೂತನ ಅಧ್ಯಕ್ಷರಾದ ಪೂರ್ಣಿಮಾ ಮುಂಡೋಡಿ, ಯಸ್ ಡಿ ಎಂ ಸಿ ಸದಸ್ಯರುಗಳು ಹಾಗೂ ಶಾಲಾ ಮುಖ್ಯ ಶಿಕ್ಷಕರು , ಶಾಲಾ ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು.










