ಸುಳ್ಯ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯಾಗಿ ಡಾ. ನವೀನ್ ಎನ್.ಎಸ್. ಎಂಬವರು ಅಧಿಕಾರ ವಹಿಸಿಕೊಂಡಿದ್ದಾರೆ.

ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಜನರಲ್ ಸರ್ಜನ್ ಆಗಿದ್ದ ಇವರು ಸುಳ್ಯಕ್ಕೆ ವಾರದ ಹಿಂದೆ ವರ್ಗಾವಣೆಗೊಂಡು ಬಂದಿದ್ದಾರೆ.. ಹಿರಿಯ ವೈದ್ಯರಾಗಿರುವುದರಿಂದ ಅವರಿಗೆ ಆಡಳಿತ ವೈದ್ಯಾಧಿಕಾರಿ ಅಧಿಕಾರ ನೀಡಲಾಗಿದೆ.















ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯಾಗಿದ್ದ ಡಾ. ಕರುಣಾಕರ್ ರವರು ಎರಡು ವಾರದ ಹಿಂದೆ ಪುತ್ತೂರು ಆಸ್ಪತ್ರೆಗೆ ವರ್ಗಾವಣೆಗೊಂಡಾಗ, ಡಾ. ಶಿವಕುಮಾರ್ ರಿಗೆ ಆಡಳಿತ ವೈದ್ಯಾಧಿಕಾರಿ ಪ್ರಭಾರ ವಹಿಸಲಾಗಿತ್ತು.
ಇದೀಗ ಡಾ.ನವೀನ್ ಎನ್.ಎಸ್. ರವರು ಸುಳ್ಯಕ್ಕೆ ಬಂದಿರುವುದರಿಂದ ಡಾ.ಶಿವಕುಮಾರ್ ರವರು ಅಧಿಕಾರ ಹಸ್ತಾಂತರ ಮಾಡಿದ್ದಾರೆ.
ಡಾ.ನವೀನ್ ಎನ್.ಎಸ್. ರವರು ಮಡಿಕೇರಿ ಮದೆನಾಡಿನ ನರಿಯನಮನೆಯವರು.










