ಜಾಲ್ಸೂರು ಗ್ರಾಮದ ಅಡ್ಕಾರು ಕೋನಡ್ಕಪದವು ನಿವಾಸಿ, ಅಟೋರಿಕ್ಷಾ ಚಾಲಕರಾಗಿದ್ದ ಮಂಜುನಾಥ ಮಣಿಯಾಣಿ ಅವರು ದಿಢೀರ್ ಅಸೌಖ್ಯಕ್ಕೊಳಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜು.23ರಂದು ಬೆಳಿಗ್ಗೆ ನಿಧನರಾದರು. ಅವರಿಗೆ 58 ವರ್ಷ ವಯಸ್ಸಾಗಿತ್ತು.















ಜ್ವರದ ಹಿನ್ನೆಲೆಯಲ್ಲಿ ಸುಳ್ಯದ ಖಾಸಗಿ ಆಸ್ಪತ್ರೆಗೆ ಜು.22ರಂದು ದಾಖಲಾಗಿದ್ದರು. ಅಲ್ಲಿ ಉಸಿರಾಟದ ಸಮಸ್ಯೆ ಎದುರಾದ ಕಾರಣ ಅವರನ್ನು ವೈದ್ಯರ ಸಲಹೆ ಮೇರೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿತ್ತು. ಅಲ್ಲಿ ಜು.23ರಂದು ಬೆಳಗ್ಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.
ಮಂಜುನಾಥ ಅವರು ಜಾಲ್ಸೂರು ಬಿ.ಎಂ.ಎಸ್. ಅಟೋಚಾಲಕ ಸಂಘದ ಸದಸ್ಯರಾಗಿದ್ದು, ಕಳೆದ ಹತ್ತು ವರ್ಷಗಳಿಂದ ಅಟೋರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದರು.
ಮೃತರು ಪತ್ನಿ ಸರೋಜಿನಿ, ಪುತ್ರಿ ಶ್ರೀಮತಿ ಸುಜಾತ, ಪುತ್ರ ಸುಮಂತ್ ಅಡ್ಕಾರು ಸೇರಿದಂತೆ ಸಹೋದರ ಸಹೋದರಿಯನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.










